ಮೈಸೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ 12 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,25,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಜಾವೀದ್ ಅಹಮದ್, ಸ್ಯೆಯದ್ ಮಹಮದ್ ನೂರುಲ್ಲಾ @ ಪಾರಿವಾಳ ಮತ್ತು ಸದ್ದಾಂ ಹುಸೇನ್ ಎಂಬವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2024 ನೇ ಸಾಲಿನಲ್ಲಿ ಸಿಸಿಬಿ ಘಟಕದಿಂದ ದಾಳಿ ನೆಡೆಸಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸಿದ್ದ ಜಾವೀದ್ ಅಹಮದ್, ಸ್ಯೆಯದ್ ಮಹಮದ್ ನೂರುಲ್ಲಾ @ ಪಾರಿವಾಳ ಮತ್ತು ಸದ್ದಾಂ ಹುಸೇನ್
ಎಂಬವರನ್ನು ಬಂಧಿಸಿ, ಅವರಿಂದ 51 ಗ್ರಾಂ ಎಂಡಿಎಂಎ, ವಾಹನ ಮತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆದು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,
ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.
7ನೇ ಅಧಿಕ ಸತ್ರ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನೆಡೆಸಿ 28.08.2026 ರಂದು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂರು ಜನರಿಗೆ 12 ವರ್ಷ ಕಠಿಣ ಕಾರಾಗೃಹ ಮತ್ತು 1,25,000 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ವಿಜಯಲಕ್ಷ್ಮಿ ವಾದ ಮಂಡಿಸಿದ್ದು, ಈ ಕಾರ್ಯವನ್ನು ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಕಾ & ಸು ) ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ & ಕೇಂದ್ರ ಸ್ಥಾನ ) ಅಭಿನಂದಿಸಿದ್ದಾರೆ.
