ಬನ್ನೂರು: ಬನ್ನೂರು ಹೋಬಳಿಯಲ್ಲಿ ಬೆಳೆ ಬೆಳೆಯಲು ನಾಲೆಗಳ ಮುಖಾಂತರ ನೀರು ಹರಿಸಲು ಕ್ರಮ ವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಜಿಲ್ಲಾಧ್ಯಕ್ಷರಾದ ಬನ್ನೂರು ನಾರಾಯಣ ನೇತೃತ್ವದಲ್ಲಿ 50ಕ್ಕೂ ಹೆಚ್ಚು ರೈತರು ಮಾಜಿ ಸಚಿವ ಹೆಚ್.ಸಿ. ಮಾದೇವಪ್ಪ ಅವರಿಗೆ ಮನವಿ ಸಲ್ಲಿಸಿದರು.
ಬನ್ನೂರು ಹೋಬಳಿಗೆ ಆಗಮಿಸಿದ ಮಾಜಿ ಸಚಿವರು ಹಾಲಿ ಶಾಸಕರಾದ ಎಚ್ ಸಿ ಮಾದೇವಪ್ಪ ಅವರನ್ನು ಮಾರ್ಗ ಮಧ್ಯದಲ್ಲಿ ಭೇಟಿ ಮಾಡಿ ರೈತರ ಸಮಸ್ಯೆಗಳ ಕುರಿತು ರೈರ ಮುಖಂಡರು ಎಳೆ,ಎಳೆಯಾಗಿ ಬಿಡಿಸಿಟ್ಟರು.
ಬಿ ಬೆಟ್ಟಹಳ್ಳಿ ಗ್ರಾಮದಲ್ಲಿ ರೈತರು ಕೃಷಿ ಚಟುವಟಿಕೆ ಮಾಡಲು ಸರ್ಕಾರಿ ಖರಾಬಿನಲ್ಲಿ ಇರುವ ಹಳ್ಳದಲ್ಲಿ ಸತತವಾಗಿ ನೀರು ಹರಿಯುವುದರಿಂದ ಜನ ಜಾನುವಾರುಗಳಿಗೆ ಓಡಾಡಲು ತೊಂದರೆಯಾಗುತ್ತಿದೆ ಹಾಗಾಗಿ ಹಳ್ಳಕ್ಕೆ ಸಣ್ಣ ಸೇತುವೆ ನಿರ್ಮಿಸಿ ಕೊಡಬೇಕೆಂದು ಕೋರಿದರು.
ಅಲ್ಲದೆ ಸಣ್ಣಪುಟ್ಟ ಬೆಳೆಗಳಿಗೆ ಹೀಗೆ ನೀರು ಅತಿಯಾಗಿ ಅವು ಸಾಯುತ್ತವೆ ಹಾಗಾಗಿ ಸೇತುವೆ ನಿರ್ಮಿಸಿದರೆ ಒಳಿತಾಗಲಿದೆ ಎಂದು ಬನ್ನೂರು ನಾರಾಯಣ ತಿಳಿಸಿದರು.
ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಮಾಡದೆ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ ಹಾಗಾಗಿ ಕೂಡಲೇ ಕಬ್ಬು ಕಟಾವು ಮಾಡಲು ಕಾರ್ಖಾನೆಗಳಿಗೆ ನಿರ್ದೇಶಿಸಬೇಕೆಂದು ಕೋರಿದರು.
ಅದೇ ಮಾರ್ಗ ಮಧ್ಯದಲ್ಲಿ ಆಗಮಿಸಿದ ಚಾಮರಾಜನಗರ ಕ್ಷೇತ್ರದ ಸಂಸದರಾದ ಸುನಿಲ್ ಬೋಸ್ ಅವರ ಗಮನಕ್ಕೂ ಸಹ ಈ ಭಾಗದ ರೈತರ ಸಮಸ್ಯೆ ತೋಡಿಕೊಳ್ಳಲಾಯಿತು.
ಬೆಳೆ ಬೆಳೆಯಲು ನಾಲೆಗಳ ಮುಖಾಂತರ ನೀರು ಹರಿಸಲು ವಿಳಂಬ ಧೋರಣೆಯನ್ನು ಖಂಡಿಸಿ ಸುನಿಲ್ ಬೋಸ್ ಅವರ ಗಮನಕ್ಕೆ ತಂದು ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಮೇಗಳಕೊಪ್ಪಲ್ ರಂಗಸ್ವಾಮಿ, ಹುನಗನಹಳ್ಳಿ ವಿಶ್ವನಾಥ್, ದೇವನಹಳ್ಳಿ ಮಹಾದೇವ,ನಾಗರಾಜು, ಪರಮೇಶಿ ಶಿವಸ್ವಾಮಿ, ಮಹೇಶ್ ಸೇರಿದಂತೆ
ಅನೇಕ ರೈತ ಮುಖಂಡರು ನಾರಾಯಣ ಅವರ ನೇತೃತ್ವದಲ್ಲಿ ರೈತರ ಬೆಳೆಗೆ ಅಗತ್ಯವಾದಷ್ಟು ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
