ಮೈಸೂರು: ಮೈಸೂರು ತಾಲ್ಲೂಕು ಬೀರಿಹುಂಡಿ ಗ್ರಾಮದಲ್ಲಿನ ಜ್ಞಾನಜ್ಯೋತಿ ವಿದ್ಯಾಲಯದಲ್ಲಿ ಎಂಬತ್ತನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪುಟಾಣಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ ಸಂಭ್ರಮಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಎನ್ ನರಸಿಂಹ ರಾವ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಶ್ರೀ ಮಲೈ ಮಹದೇಶ್ವರ ಪತ್ತಿನ ಸಹಕಾರ ಸಂಘದ ಹಾಲಿ ನಿರ್ದೇಶಕರು, ನಿಕಟಪೂರ್ವ ನಿರ್ದೇಶಕರಾದ ಶ್ರೀ ಕಾನ್ಯಾ ಶಿವಮೂರ್ತಿ ಅವರು ಭಾಗವಹಿಸಿ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಸೋಮಶೇಖರ್ ಅವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಿ, ಸ್ವಚ್ಛ ಶ್ರೇಷ್ಠ ಭಾರತದ ನಿರ್ಮಾಣದ ಪ್ರತಿಜ್ಞೆಯನ್ನು ಮಕ್ಕಳಿಗೆ ಬೋಧಿಸಿದರು.
ಶ್ರೀ ಆನಂದ್ ಸಚ್ಚಿದ್ ಅವರು ಮಾತನಾಡಿ ಪೋಷಕರು ಹಾಗೂ ಶಿಕ್ಷಕರ ಮಹತ್ವವನ್ನು ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ಸಂಧ್ಯಾ.ಡಿ.ಬಿ, ಪ್ರಾಂಶುಪಾಲರಾದ ಕೆ ಎನ್ ಸುಜಾತ, ಶಿಕ್ಷಕರುಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
