ಮೈಸೂರು: ಹಿಂದೂ ಜಾಗರಣ ವೇದಿಕೆ ವತಿಯಿಂದ 79ನೇ ಭಾರತ ಸ್ವಾತಂತ್ರ್ಯೋತ್ಸವದ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ನಾಳೆ ಆ.14. ಸಂಜೆ 6 ಗಂಟೆಗೆ ಜಿಲ್ಲಾ ಮಟ್ಟದ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಇದರ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ ಮುಂಭಾಗ ಹಾಗೂ ಜಗನ್ಮೋಹನ ಅರಮನೆ ಸುತ್ತಮುತ್ತ ಯುವಕರಿಗೆ ಕರಪತ್ರ ನೀಡಿ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಯಿತು.
1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶ ವಿಭಜನೆಗೊಂಡ ಆ ಕರಾಳ ರಾತ್ರಿಯ ದುರಂತವನ್ನು ಸಮಾಜ ಬಾಂಧವರಲ್ಲಿ ನೆನಪಿಸುವುದು ಮತ್ತು ಕಳೆದು ಹೋಗಿರುವ ಭೂಭಾಗಗಳನ್ನು ಮತ್ತೆ ಒಂದುಗೂಡಿಸುವ ಸಂಕಲ್ಪದೊಂದಿಗೆ ಜಿಲ್ಲಾ ಮಟ್ಟದ ಪಂಜಿನ ಮೆರವಣಿಗೆ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ, ಇಂದಲ್ಲ ನಾಳೆಯಾದರೂ ಆ ಭವ್ಯ ಅಖಂಡ ಭಾರತವನ್ನು ಕಟ್ಟಿಯೇ ಕಟ್ಟುತ್ತೇವೆ ಎಂದು
ಹಿಂದೂ ಜಾಗರಣ ವೇದಿಕೆ ದೃಢ ಸಂಕಲ್ಪ ಮಾಡಿದೆ.
ಏಳಿ ಎದ್ದೇಳಿ ನಿಲ್ಲದೆ ಗುರಿ ಮುಟ್ಟುವ ತನಕ ಇದೇ ನಮ್ಮ ಸಂಕಲ್ಪ ಇದೇ ನಮ್ಮ ಗುರಿ.ನಾಳೆ ಶುಕ್ರವಾರ ಸಂಜೆ 6 ಗಂಟೆಗೆ ಹಳೆ ಆರ್ಎಂಸಿ ವೃತ್ತದಲ್ಲಿರುವ ಮಹಾ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗೂ ಬೃಹತ್ ಪಂಜಿನ ಮೆರವಣಿಗೆ ಮುಕ್ತಾಯಗೊಳ್ಳಲಿದೆ.
ನಂತರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾದ ದೋ. ಕೇಶವಮೂರ್ತಿ ನೆರವೇರಿಸಲಿದ್ದಾರೆ.
ಪ್ರತಿಯೊಬ್ಬರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಅಖಂಡ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ ಮಾಡೋಣ ಎಂದು ಸಂಘಟನೆಯ ಸಹ ಸಂಯೋಜಕ ಸಂದೇಶ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ವಿಕ್ರಂ ಅಯ್ಯಂಗಾರ್, ಪ್ರಮೋದ್ ಗೌಡ, ವಕೀಲ ಶಿವರಾಜ್, ಅಭಿಷೇಕ್ ಗೌಡ, ವಸಂತ್ ಕುಮಾರ್, ಚಂದ ಸ್ವಾಮಿ, ಶ್ರೀನಿಧಿ, ಅಜಯ್ ಮತ್ತಿತರರು ಹಾಜರಿದ್ದರು.
