ಆಗಸ್ಟ್ ೧೩ ರಂದು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರ ವಾಟಾಳ್ ನಾಗರಾಜ್ ಅವರು ಕರೆದಿರುವ ಕರ್ನಾಟಕ ಬಂದ್ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮೈಸೂರಿನ ಕೃಷ್ಣರಾಜ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ಧನರಾಜ್ ಮನವಿ ಮಾಡಿದರು.
ಆಗಸ್ಟ್ ೧೩ ರಂದು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಾಟಾಳ್ ನಾಗರಾಜ್ ಅವರು ಕರೆದಿರುವ ವೃತ್ತ ನಿರೀಕ್ಷಕರಾದ ಧನರಾಜ್ ಅವರು ವಿವಿಧ ಕನ್ನಡಪರ ಹೋರಾಟಗಾರರನ್ನು ಕರೆದು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಬಂದ್ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಕನ್ನಡಪರ ಹಿರಿಯ ಹೋರಾಟಗಾರರಾದ ಶಿವಶಂಕರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ, ಕನ್ನಡ ಕ್ರಾಂತಿದಳ ಅಧ್ಯಕ್ಷರಾದ ತೇಜಸ್ವಿ ನಾಗಲಿಂಗಸ್ವಾಮಿ,ನಗರ ಪಾಲಿಕೆ ಮಾಜಿ ಸದಸ್ಯರು ಕನ್ನಡ ಹೋರಾಟಗಾರರಾದ ಪಾರ್ಥಸಾರಥಿ, ಕರ್ನಾಟಕ ವೀರ ಕೇಸರಿ ಪಡೆ ಅಧ್ಯಕ್ಷರಾದ ಮಧುವನ ಚಂದ್ರು, ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷ ಆಟೋ ಮಹೇಶ್ ಕುಮಾರ್, ಕನ್ನಡ ಸೇನೆ ಮೈಸೂರು ಜಿಲ್ಲಾಧ್ಯಕ್ಷಾದ ಶೈಲಜಾ, ಹೋರಾಟಗಾರರಾದ ನಾಲಬೀದಿ ರವಿ, ಮಾದಪ್ಪ ಇನ್ನಿತರರು ಉಪಸ್ಥಿತರಿದ್ದರು
