ಹೆಚ್.ಡಿ.ಕೋಟೆ: ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಜಲಾಶಯ ಭರ್ತಿಯಾಗುವತ್ತ ಸಾಗಿದೆ.
ಇಂದು ದಾಖಲಾದ ಅಂಕಿಅಂಶಗಳ ಪ್ರಕಾರ, ಜಲಾಶಯದ ಗರಿಷ್ಠ ಮಟ್ಟ 2284.00 ಅಡಿಗಳಾಗಿದ್ದು, ಇಂದಿನ ಮಟ್ಟ 2283.04 ಅಡಿಗಳಷ್ಟಿದೆ. ಕಳೆದ ವರ್ಷ ಇದೇ ದಿನ 2281.69 ಅಡಿಗಳಷ್ಟಿತ್ತು.
ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಇಂದಿನ ಸಂಗ್ರಹ 18.89 ಟಿಎಂಸಿ ಆಗಿದೆ. ಕಳೆದ ವರ್ಷ 18.05 ಟಿಎಂಸಿ ಇತ್ತು.
ಜಲಾಶಯಕ್ಕೆ ಒಳಹರಿವು 12,044 ಕ್ಯೂಸೆಕ್ ದಾಖಲಾಗಿದೆ. ಕಳೆದ ವರ್ಷ 3,716 ಕ್ಯೂಸೆಕ್ ಇತ್ತು.ನದಿಯಿಂದ 12,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
