ಮೈಸೂರು: ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈ ತಪ್ಪುವುದರಲ್ಲಿ ಜಿಲ್ಲೆಯ ಮಾಜಿ ಸಿಎಂ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಾಂಬ್ ಸಿಡಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಲು ಮಾಜಿ ಸಿಎಂ ಕಾರಣ ಹೆಸರು ಹೇಳದೆಯೆ ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಅನುಗುಣವಾಗಿ ಸಂಪುಟ ರಚನೆಯಾಗಿದೆ. ಆದರೆ ಹಿರಿಯ ರಾಜಕಾರಣಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು ಎಂದು
ಹೇಳಿದರು.
ತನ್ವೀರ್ ಗೆ ಸಚಿವ ಸ್ಥಾನ ನೀಡಿದರೆ ತಮ್ಮ ಮಗನ ಪ್ರಭಾವ ಕುಗ್ಗುತ್ತದೆ ಎಂದು ಸಚಿವ ಸ್ಥಾನ ತಪ್ಪಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಹೋಗಬೇಕಿತ್ತು. ಆದರೆ ದುರಹಂಕಾರದ ನಡೆಯಿಂದ ಸಿದ್ದರಾಮಯ್ಯ ಹೋಗಲಿಲ್ಲ. ಸಿದ್ದರಾಮಯ್ಯ ಅವರ ನಡವಳಿಕೆ ಸರಿಯಿಲ್ಲ ಅಂತ ಹೇಳಿದ್ದು ನಾನು ಒಬ್ಬನೇ ಎಂದು ಎಚ್. ವಿಶ್ವನಾಥ್ ತಿಳಿಸಿದರು.
