ಮೈಸೂರು: ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ) ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಬಿ ಶಿವಣ್ಣ, ರಾಜ್ಯ ಮಹಿಳಾ ಘಟಕದ ರಂಜಿತಾ ಸುಬ್ರಮಣ್ಯ,ರಾಜ್ಯ ಮಾಧ್ಯಮ ವಕ್ತಾರರಾದ ಸೂರ್ಯವರ್ಧನ್,ರಾಜ್ಯ ಯುವ ಘಟಕದ ಅಧ್ಯಕ್ಷ ಪವನ್ ಸಿಂಹ, ಮೈಸೂರು ಜಿಲ್ಲಾ ಅಧ್ಯಕ್ಷರಾದ ಪಿ ಕುಮಾರ್ ಸ್ವಾಮಿ
ಮೈಸೂರು ಜಿಲ್ಲಾ ಕಾನೂನು ಸಲಹೆಗಾರರದ ಪ್ರದೀಪ್ ಬಿಡನ್, ವಕೀಲರಾದ ಜಿ.ಕೆ ಗುರು, ಕೃಷ್ಣ,ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಯುವ ಘಟಕದ ಅಧ್ಯಕ್ಷರಾದ ಅರ್ಪಿತಾ, ಚಾಮರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಸಧ್ಯಸ್ಯರಾದ
ರೇಖಾ ಸುಬ್ರಮಣ್ಯ,ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 25 ಅಧ್ಯಕ್ಷರಾದ ಮಮತಾ,ವೀಣಾ, ಉಷಾ, ಶ್ಯಾಮಲಾ ಹಾಜರಿದ್ದರು.
ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷರಾಗಿ ಶಶಾಂಕ್ ಎಸ್.ಜಿ ಮತ್ತು ಮೈ. ಜಿಲ್ಲಾ ಮಹಿಳಾ ಮೋರ್ಚಾ ಅರ್ಚನಾ ಅವರನ್ನು ನೇಮಕ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷರು, ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಪಕ್ಷದ ಸಂಘಟನೆ ಬಲವರ್ಧನೆ, ಸದಸ್ಯತ್ವ ಅಭಿಯಾನ, ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಯ ಸಿದ್ಧತೆ, ರೈತರ ಸಮಸ್ಯೆಗಳು, ಯುವಕರ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿಲಾಯಿತು.
ಪಕ್ಷದ ಸಂಘಟನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಹಾಗೂ ಗ್ರಾಮ ಮಟ್ಟಕ್ಕೆ ಮತ್ತಷ್ಟು ವಿಸ್ತರಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವ ಪಕ್ಷವಾಗಿ ಕಾರ್ಯನಿರ್ವಹಿಸಿ, ರೈತರು, ಕಾರ್ಮಿಕರು, ಯುವಕರು, ಮಹಿಳೆಯರು ಹಾಗೂ ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಪಕ್ಷ ಬದ್ಧವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
