ಮೈಸೂರು: ದೇಶದಲ್ಲಿರುವ ಇಸ್ಲಾಮಿಕ್ ಟ್ರಸ್ಟ್ ಗಳು ಮತ್ತು ಸಂಸ್ಥೆಗಳ ಹಣಕಾಸು ಮೂಲ ಹಾಗೂ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಇಂದು ಸಂಜೆ ಹಿಂದು ಜಾಗರಣ ವೇದಿಕೆ ಮೈಸೂರು ಮಹಾನಗರ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ವೃತ್ತದಲ್ಲಿ ಸಂಜೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಇಸ್ಲಾಮಿಕ್ ಟ್ರಸ್ಟ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹಿಂದು ಜಾಗರಣ ವೇದಿಕೆ ಸಂಯೋಜಕರಾದ ವಸಂತ್ ಕುಮಾರ್
ಮಾತನಾಡಿ, ನಮ್ಮ ದೇಶದಲ್ಲಿ ಇದ್ದುಕೊಂಡು ನಮ್ಮ ಗಾಳಿ, ನಮ್ಮ ನೀರು ನಮ್ಮ ಆಹಾರ ಸೇವಿಸುತ್ತಾ ದೇಶಕ್ಕೆ ದ್ರೋಹ ಬಗೆಯುವ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.
ಇಸ್ಲಾಮಿಕ್ ಟ್ರಸ್ಟ್, ಸಂಸ್ಥೆಗಳ ಮೇಲೆ ಭಯೋತ್ಪಾದನೆ ಚಟುವಟಿಕೆಗೆ ಯುವಕರನ್ನು ಸಿರಿಯಾಕ್ಕೆ ಕಳುಹಿಸಿ ಕೊಟ್ಟಿರುವುದು ಮತ್ತು ಅವರಿಗೆ ಆರ್ಥಿಕ ನೆರವು ನೀಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ ಇಂದು 8 ಕಡೆ ದಾಳಿ ನಡೆಸಿದ್ದಾರೆ ಇದನ್ನು ಆಧರಿಸಿ, ದೇಶದಲ್ಲಿರುವ ಎಲ್ಲಾ ಇಸ್ಲಾಮಿಕ್ ಟ್ರಸ್ಟ್ ಗಳು ಮತ್ತು ಸಂಸ್ಥೆಗಳ ಹಣಕಾಸು ಮೂಲ, ವ್ಯವಹಾರಗಳನ್ನು ತನಿಖೆಗೆ ಒಳಪಡಿಸಲೇಬೇಕು ಎಂದು ಒತ್ತಾಯಿಸಿದರು
ಹಿಂದು ಜಾಗರಣ ವೇದಿಕೆಯ ಸಹ ಸಂಯೋಜಕರಾದ ಸಂದೇಶ್, ಚಂದ್ರು, ಸ್ವಾಮಿ , ರಾಜನ್, ಶಿವು ನಾಯಕ್, ಡಾ ಶ್ರೇಯಸ್, ಪ್ರಮೋದ್, ಉಮೇಶ್, ಯಶೋದ, ದೂರ ರಾಜಣ್ಣ,ವಿನೋದ್ ಅರಸ್, ಜಗದೀಶ್, ರಾಘವೇಂದ್ರ, ಸ್ಕಂದ, ಅಭಿಷೇಕ್, ಆರ್ಯನ್, ಗಗನ್ , ಮುಂತಾದ ಹಲವು ಕಾರ್ಯಕರ್ತರು ಭಗವಹಿಸಿದ್ದರು.
