ನಂಜನಗೂಡು: ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನೀಚನನ್ನು ಜನರೇ ಹಿಡಿದು ಗೂಸ ಕೊಟ್ಟ ಪ್ರಸಂಗ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕು ಕಡಬೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಸುರೇಶ್(23) ಎಂಬಾತನಿಗೆ ಒದೆ ಬಿದ್ದಿದೆ.
ಬಾಲಕಿಯ ತಂದೆ ತಾಯಿ ಕೂಲಿ ಕೆಲಸ ಮಾಡುತ್ತಾರೆ.ಎಂದಿನಂತೆ ಕೂಲಿಗೆ ಅವರು ಹೋಗಿದ್ದರು, ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು.
ಇದನ್ನು ಗಮನಿಸಿದ ಮನೆಗೆ ನುಗ್ಗಿದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಆಗ ಬಾಲಕಿ ಜೋರಾಗಿ ಕೂಗಾಡಿದ್ದಾಳೆ.ತಕ್ಷಣ ಸ್ಥಳೀಯ ನಿವಾಸಿಗಳು ಧಾವಿಸಿ ಆತನನ್ನು ಹಿಡಿದು ಚೆನ್ನಾಗಿ ಥದಕಿ ಹುಲ್ಲಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
