ಪಿರಿಯಾಪಟ್ಟಣ: ರೈತ ಸಂಘ,ಹಸಿರು ಸೇನೆ ವತಿಯಿಂದ ರೈತ ಹುತಾತ್ಮರ ದಿನಾಚರಣೆಯನ್ನು ಮಂಗಳವಾರ ಪಿರಿಯಾಪಟ್ಟಣದಲ್ಲಿ ಆಚರಿಸಿ,
ಪ್ರೊ.ನಂಜುಂಡ ಸ್ವಾಮಿಯವರನ್ನು ಸ್ಮರುಸಲಾಯಿತು.
ಈ ವೇಳೆ ಪ್ರೊಫೆಸರ್ ನಂಜುಂಡಸ್ವಾಮಿ ಅವರ ಫೋಟೋ ಇರಿಸಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ನಂತರ ನಂಜುಂಡಸ್ವಾಮಿ ಅವರ ಗುಣಗಾನ ಮಾಡಿ,ಅವರ ಕೆಲಸಗಳನ್ನು ಸ್ಮರಿಸಿ ಶಾಂತಿ ಕೋರಿ,ಮೌನಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಆರ್ ಮಂಜುನಾಥಗೌಡರು ಮಾತನಾಡಿ, ಸರ್ಕಾರವೇ ರೈತರ ದಿನಾಚರಣೆಯನ್ನು ಮಾಡುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ,ರೈತರು ಕಂಗಾಲಾಗಿದ್ದಾರೆ,ರೈತರಿಗೆ ಪರಿಹಾರ ಕೊಡಬೇಕು,ಜಮೀನು ಸರ್ವೆ ಮುಖಾಂತರ ಸಾಲ ಮನ್ನಾ ಮಾಡಬೇಕೆಂದು ಅಗ್ರಹಿಸಿದರು
ಈ ಕಾರ್ಯಕ್ರಮದಲ್ಲಿ ಸೋಮೇಗೌಡರು, ಮಾದೇವ್, ಪ್ರಕಾಶ್, ಪ್ರಭು, ಕೋಣಸುರು ಶಿವರಾಜ್, ದೇವಶೆಟ್ಟಿ, ನಾಗೇಂದ್ರ, ಅನಗೋಡ್ ಪ್ರಕಾಶ್, ಮಾಕೋಡ್ ಬಸವರಾಜ್,ಯೋಗಣ್ಣ, ಮಹಿಳಾ ಅಧ್ಯಕ್ಷರಾದ ಕಾವೇರಮ್ಮ, ಸತೀಶ್, ಪ್ರಕಾಶ್, ವಿಶ್ವನಾಥ್, ಪಾಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.
