ಮೈಸೂರು: ಭಗವಾನ್ ರಮಣ ಮಹರ್ಷಿಗಳ 146ನೇ ಜಯಂತಿ ಪ್ರಯುಕ್ತ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮತ್ತು ಪುಸ್ತಕ, ಲೇಖನಿ ಸಾಮಗ್ರಿಗಳನಯ ವಿತರಣೆ ಮಾಡಲಾಯಿತು.
ಮೈಸೂರಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ
ಶ್ರೀ ರಮಣ ಜ್ಞಾನ ಕೇಂದ್ರ ಟ್ರಸ್ಟ್ ಆವರಣದಲ್ಲಿ ಭಗವಾನ್ ರಮಣ ಮಹರ್ಷಿಗಳ 146 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ನಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1 ಲಕ್ಷ ರೂ ವರೆಗೂ ಧನಸಹಾಯ ಮಾಡಲಾಯಿತು ಹಾಗೂ
100ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳು ವಿತರಿಸಿದ್ದು ವಿಶೇಷ.
ಈ ಸಂದರ್ಭದಲ್ಲಿ ಮಾನಸ ಗಂಗೋತ್ರಿಯ ತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್ ಎಲ್ ಚಂದ್ರಶೇಖರ್ ಭಗವಾನ್ ರಮಣ ಮಹರ್ಷಿಗಳ ಬಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಕೆ ಜಿ ಸುಧೀಂದ್ರ, ಲಾ ಫರ್ ಆಲ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕರು ಹಾಗೂ ಮಾಜಿ ಜಿಲ್ಲಾ ಸಹಕಾರಿ ವಕೀಲರು, ಮಾನಸ ಗಂಗೋತ್ರಿಯ ತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್ ಎಲ್ ಚಂದ್ರಶೇಖರ್, ನಗರ ಪಾಲಿಕೆ ಮಾಜಿ ಸದಸ್ಯರು ಚಲನಚಿತ್ರ ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ (ಪಾತಿ),
ಕೆ ಎಮ್ ಪಿ ಕೆ ಚಾರ್ಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಶ್ರೀ ರಮಣ ಜ್ಞಾನ ಕೇಂದ್ರ ಗೌರವಾಧ್ಯಕ್ಷರು ಎ ಜಿ ಸುವ್ರತೀಂದ್ರ, ಗೌರವ ಕಾರ್ಯದರ್ಶಿ ಗೀತಾ ಚರಣ್, ಗೌರವ ಕಾರ್ಯಂಗ ಅಧ್ಯಕ್ಷರು ಪ್ರಾರ್ಥನಾ ಕುಮಾರಿ, ವ್ಯವಸ್ಥಾಪಕರು ಶಶಿಕುಮಾರ್, ರಾಘವೇಂದ್ರ ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.
