ಮೈಸೂರು: ಶಿಕ್ಷಣ ವಿದ್ಯಾರ್ಥಿಗಳ ಜೀವನದ ಭದ್ರಬುನಾದಿ ಇದು ಭವಿಷ್ಯ ರೂಪಿಸುವ ಸಾಧನವಾಗಿದೆ, ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಹೇಳಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು
ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು, ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದರೂ ಶಿಕ್ಷಣವಂತರಾಗಿದ್ದರೇ ಮಾತ್ರ ಉನ್ನತ ಸ್ಥಾನಕ್ಕೇರಿ ಸಾಧನೆ ಮಾಡಲು ಸಾಧ್ಯ, ಹಾಗಾಗಿ ಎಷ್ಟೆ ತೊಂದರೆಯಿದ್ದರೂ ಶಿಕ್ಷಣವನ್ನ ಮಕ್ಕಳು ಮೊಟಕುಗೊಳಿಸದೇ ವ್ಯಾಸಾಂಗ ಮಾಡಬೇಕು ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಸಮಾಜ ಸೇವಕ ದೂರ ರಾಜಣ್ಣ, ಶಿವಲಿಂಗ ಸ್ವಾಮಿ, ಶಿವಪ್ರಸಾದ್, ಹೇಮಂತ್ ಕುಮಾರ್, ಆದರ್ಶ, ಶಿಕ್ಷಕರಾದ ಸಂಧ್ಯಾ ರಾಣಿ, ತಸೀರ್ ಬೇಗ್ ಮತ್ತಿತರರು ಹಾಜರಿದ್ದರು.
