ಬೆಂಗಳೂರು: ಬೆಂಗಳೂರು ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಭರ್ಜರಿ
ಕಾರ್ಯಾಚರಣೆ ನಡೆಸಿ, 25.23 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂವರು ವಿದೇಶಿ ಪ್ರಜೆಗಳು ಸೇರಿದಂತೆ
ವಿವಿಧ ರಾಜ್ಯಗಳ ಒಟ್ಟು 17 ಮಂದಿ ಡ್ರಗ್ಸ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಗಾಂಜಾ, ಹೈಡ್ರೋ ಗಾಂಜಾ, ಮತ್ತು ಎಂಡಿಎಂಎ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿಗಳು ವಿದೇಶಗಳಿಂದ ಮತ್ತು ಇತರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು, ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ವಾಚಾರಣೆ ವೇಳೆ ಗೊತ್ತಾಗಿದೆ.
ಮಾದಕ ದ್ರವ್ಯಗಳ ಜೊತೆಗೆ ಇ-ಸಿಗರೇಟ್ಗಳು, ಹುಕ್ಕಾ ಸಾಮಗ್ರಿಗಳು, ವಾಹನಗಳು ಮತ್ತು ಮೊಬೈಲ್ ಫೋನ್ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಸುಬ್ರಹ್ಮಣ್ಯನಗರ, ಮಡಿವಾಳ, ರಾಜಾಜಿನಗರ, ವೈಟ್ಫೀಲ್ಡ್, ತಿಲಕ್ನಗರ, ಯಶವಂತಪುರ ಮತ್ತು ಇಂದಿರಾನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ನೈಜೀರಿಯಾ ಪ್ರಜೆಗಳ ಲಗೇಜ್ನಲ್ಲೇ ಬರೋಬ್ಬರಿ 21 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು ಅದು ಸೇರಿ ಒಟ್ಟು 25.23 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
