ಯಳಂದೂರು: ಯಳಂದೂರು ತಾಲ್ಲೂಕು ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ವಕೀಲರ ಸಂಘದ ಕಚೇರಿಯಲ್ಲಿ ನಡೆಯಿತು.
ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಜಯಶಂಕರ್ ರವರನ್ನು ಆಯ್ಕೆ ಮಾಡಲಾಯಿತು.
ಚುನಾವಣೆ ಮೂಲಕ 4 ಮತದಲ್ಲಿ ಪ್ರದಾನ ಕಾರ್ಯದರ್ಶಿಯಾಗಿ ಗಂಗಾವಾಡಿ ಸಂಪತ್ ಅವರು ಆಯ್ಕೆ ಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮುತ್ತುರಾಜ್,ಜಂಟಿ ಕಾರ್ಯದರ್ಶಿ ಮೇಘ, ಖಜಾಂಚಿ ರಂಜಿತಾ ಅವರು ಆಯ್ಕೆ ಯಾಗಿದ್ದಾರೆ,
ಈ ವೇಳೆ ನೂತನ ಅಧ್ಯಕ್ಷ ಜಯಶಂಕರ್ ಮಾತನಾಡಿ ನಮ್ಮ ವಕೀಲರ ಸಂಘದ ಪದಾಧಿಕಾರಿಗಳು ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಕೀಲರ ಜೊತೆಯಲ್ಲೇ ಇದ್ದು, ಸದಾ ಸ್ಪಂದಿಸುತ್ತಾ, ಹಿರಿಯ ವಕೀಲರ ಸಲಹೆ ಪಡೆದು ಸಂಘಕ್ಕೆ ಬದ್ದನಾಗಿರುತ್ತೇನೆ ಎಂದು ಭರವಸೆ ನೀಡಿದರು.
ನೂತನ ಪ್ರದಾನ ಕಾರ್ಯದರ್ಶಿ ಸಂಪತ್ ಮಾತನಾಡಿ,ನಾನು ವಕೀಲನಾದಾಗಿನಿಂದ ನನಗೆ ತಮ್ಮ ಸಹಕಾರ ನೀಡಿದ್ದೀರಿ ನಿಮ್ಮ ಸೇವೆ ಮಾಡಲು ನನಗೆ ಮತ್ತೊಮ್ಮೆ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದು, ಎಲ್ಲಾ ವಕೀಲರು ಹಾಗೂ ಹಿರಿಯ ವಕೀಲರ ಜೊತೆ ಅವರ ಮಾರ್ಗದರ್ಶನ ಪಡೆದು ಸಂಘದ ಹಾಗೂ ಕಚೇರಿಯ ಬಗ್ಗೆ ಕಾನುನಾತ್ಮಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ರವೀಶ್, ಮಹದೇವಸ್ವಾಮಿ. ಬಿ, ಸಿದ್ದರಾಜು, ಸಿ.ಮಹದೇವಸ್ವಾಮಿ, ಮಲ್ಲಿಗೆಹಳ್ಳಿ ಕುಮಾರಸ್ವಾಮಿ, ಹೊನ್ನೂರು ನಾಗರಾಜ್, ಕೃಷ್ಣ, ಗೌಡಹಳ್ಳಿ ಮಹೇಶ್, ನಾಗರಾಜ್, ಪರಶಿವ ಮೂರ್ತಿ, ಅಶ್ವಿನ್, ಯರಿಯೂರು ಕುಮಾರಸ್ವಾಮಿ, ಶಶಿದರ್, ಗಣಿಗನೂರು ನಾಗರಾಜು, ನಂಜುಂಡಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.
