ಚಾಮರಾಜನಗರ: ಕಾಡು ಪ್ರಾಣಿ ಬೇಟೆಯಾಡಲು ಹೊಂಚು ಹಾಕಿದ್ದ ವ್ಯಕ್ತಿಯನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.
ಯಳಂದೂರು ಪೊಲೀಸ್ ಠಾಣೆಯ ಸಹಾಯಕ ಅರಕ್ಷಕ ಉಪ ನಿರೀಕ್ಷಕ ನಂದಕುಮಾರ್ ಅವರಿಗೆ ದೊರೆತ ಮಾಹಿತಿ ಮೆರೆಗೆ ಹನೂರು ಪೊಲೀಸರು ದಾಳಿ ನಡೆಸಿದರು.
ಬಸ್ ನಿಲ್ದಾಣದ ಬಳಿ
ಕಾಡು ಪ್ರಾಣಿ ಬೇಟೆಯಾಡಲು ಆಕ್ರಮವಾಗಿ ನಾಡ ಬಂದೂಕು ಹೊಂದಿದ್ದ ವ್ಯಕ್ತಿಯ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಕಾಡು ಪ್ರಾಣಿ ಬೇಟೆಯಾಡಲು ಹೊರಟಿದ್ದಾಗಿ ಬಾಯಿ ಬಿಟ್ಟಿದ್ದಾನೆ.
ಹನೂರು ಪೊಲೀಸ್ ಠಾಣೆಗೆ ವಲಯ ಅರಣ್ಯ ಅಧಿಕಾರಿ,ಹನೂರು ವನ್ಯಜೀವಿ ವಲಯದ ನಿರಂಜನ್ ಅವರು ಹಾಜರಾಗಿ ನೀಡಿದ ದೂರಿನ ಮೇರಗೆ ಅರಕ್ಷಕ ಉಪ ನಿರೀಕ್ಷಕರಾದ ಸಾಹೇಬ್ ಗೌಡ ಅವರು ಕಾಡು ಪ್ರಾಣಿ ಬೇಟೆಯಾಡಲು ಅಕ್ರಮವಾಗಿ ನಾಡ ಬಂದೂಕು ಮತ್ತು ಗುಂಡುಗಳನ್ನು ಹೊಂದಿದ್ದ ಮರಿಯ ಮಂಗಲ ಗ್ರಾಮದ
ಆರೋಪಿ ಪೀಟರ್ ತಾಮಸ್ (32) ಎಂಬಾತನನ್ನು ಬಂಧಿಸಲಾಗಿದೆ
ಆತನಿಂದ ಒಂದು ಒಂಟಿ ನಳಿಕೆಯ ನಾಡ ಬಂದೂಕು, 26 ಕಚ್ಚಾ ಮದ್ದು ಗುಂಡುಗಳು, 400 ಕಬ್ಬಿಣದ ಬಾಲ್ಸ್ ಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು.ಎಂ ಅವರು ಪ್ರಶಂಸನೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಹೆಚ್ಚಿನ ಅಕ್ರಮಗಳನ್ನು ಪತ್ತೆ ಹಚ್ಚಿ ನಿಗ್ರಹಿಸುವಂತೆ ಸೂಚನೆ ನೀಡಿದ್ದಾರೆ.
