ಪಾಕಿಸ್ತಾನ: ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ರಸ್ತೆ ಬದಿಯ ಐಇಡಿ ಅವಳಿ ಸ್ಫೋಟಗಳಲ್ಲಿ ಎಂಟು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
ಪ್ರಯಾಣಿಕರಿದ್ದ ಖಾಸಗಿ ಪಿಕಪ್ ವಾಹನವನ್ನು ಗುರಿಯಾಗಿಸಿ ಮೊದಲ ಐಇಡಿ ಸ್ಫೋಟಿಸಲಾಗಿದೆ. ಇದರಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸ್ಥಳೀಯರು ಮತ್ತು ರಕ್ಷಕರನ್ನು ಗುರಿಯಾಗಿಸಿ ಅದೇ ಸ್ಥಳದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಇದರಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಗಡಿ ಭಾಗದ ಈ ಪ್ರದೇಶದಲ್ಲಿ ಇಂತಹ ಭಯೋತ್ಪಾದನಾ ಕೃತ್ಯಗಳಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಕೈವಾಡವಿರುವ ಶಂಕೆ ಇದೆ.
