ಹೆಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳ ವ್ಯಾಪ್ತಿಯ ಮಾಸ್ತಿಗುಡಿ ಗಸ್ತಿನ ಕುಂಬಳಗೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ 7 ವರ್ಷ ಪ್ರಾಯದ ಹೆಣ್ಣು ಹುಲಿಯ ಮೃತದೇಹ ಪತ್ತೆಯಾಗಿದೆ.
ಮತ್ತೊಂದು ಹುಲಿಯೊಂದಿಗೆ ಕಾದಾಡಿ ಹುಲಿ ಸಾವಿಗೀಡಾಗಿರಬಹುದೆಂದು ಅರಣ್ಯ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ.ವಸೀಮ್ ಮಿರ್ಜಾ, ಡಾ.ಬಿ.ಬಿ.ಪ್ರಸನ್ನ ಅವರು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಅಂಗಾಂಗಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಕಳೇಬರವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಡಿಸಿಎಫ್ ಪಿ.ಎ.ಸೀಮಾ, ಎಸಿಎಫ್ ಎಸ್.ಡಿ.ಮಧು, ಆರ್ಎಫ್ಒ ಎಸ್.ಹನುಮಂತರಾಜು, ಎನ್ಟಿಸಿಎ ಪ್ರತಿನಿಧಿ ಆರ್.ಅವಿನಾಶ್, ಮುಖ್ಯ ವನ್ಯಜೀವಿ ಪರಿಪಾಲಕರ ಪ್ರತಿನಿಧಿ ಆರ್.ರವೀಂದ್ರ, ಡಿಆರ್ಎಫ್ಒ ಗಳಾದ ಅಭಿಲಾಷ್, ಶಶಿಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
