ಬೆಂಗಳೂರು: ಒಮ್ಮೆ ಉದ್ಯಾನ ನಗರಿಯಾಗಿ ವಿಶ್ವದ ಗಮನ ಸೆಳೆದಿದ್ದ ಬೆಂಗಳೂರು ಇಂದು ಸಂಚಾರ ದಟ್ಟಣೆ, ಕಸದ ಸಮಸ್ಯೆ, ನೀರಿನ ಅಭಾವ, ಮಾಲಿನ್ಯ, ಕೆರೆಗಳ ನಾಶ, ಮರಗಳ ಕಡಿತ ಮತ್ತು ಪ್ರವಾಹದಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ನಗರದ ಭವಿಷ್ಯ ಹಾಗೂ ಬೆಂಗಳೂರಿಗರ ಜೀವನಮಟ್ಟವನ್ನು ರಕ್ಷಿಸುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷವು ಬೆಂಗಳೂರು ಉಳಿಸಿ
ಹಸಿರು ಕಾರ್ಯಸೂಚಿ ಯನ್ನು ಸಾರ್ವಜನಿಕರ ಮುಂದಿಡುತ್ತಿದೆ.
ಈ ಕಾರ್ಯಸೂಚಿಯ ಮೂಲಕ ಬೆಂಗಳೂರಿನ ಪರಿಸರ ಸಂರಕ್ಷಣೆ, ಸುಸ್ಥಿರ ನಗರಾಭಿವೃದ್ಧಿ, ಪಾರದರ್ಶಕ ಆಡಳಿತ ಹಾಗೂ ನಾಗರಿಕರ ಜೀವನಮಟ್ಟ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಪ್ರಸ್ತಾವನೆಗಳನ್ನು ಪ್ರಕಟಿಸುವುದಾಗಿ ಪಕ್ಷ ತಿಳಿಸಿದೆ.
ಇದೇ 15 ಜೂನ್ ಸೋಮವಾರ ಬೆಳಿಗ್ಗೆ 10.30ಕ್ಕೆ ಕಾನ್ಫರೆನ್ಸ್ ಹಾಲ್, ಬೆಂಗಳೂರು ಪ್ರೆಸ್ ಕ್ಲಬ್ ಆವರಣ ದಲ್ಲಿ ನಡೆಯುವ
ಕಾರ್ಯಕ್ರಮದಲ್ಲಿ ಹಸಿರು ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷ ತಿಳಿಸಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ದೆಹಲಿ ರಾಜ್ಯದ ಮಾಜಿ ಶಾಸಕರು ಹಾಗೂ ಕೇಂದ್ರ ಸಂಘಟನಾ ಉಸ್ತುವಾರಿಗಳಾದ ಋತುರಾಜ್ ಗೋವಿಂದ್,ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹಾಗೂ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಿ ಹಸಿರು ಕಾರ್ಯಸೂಚಿಯ ಪ್ರಮುಖ ಅಂಶಗಳನ್ನು ವಿವರಿಸಲಿದ್ದಾರೆ.
ಬೆಂಗಳೂರು ಉಳಿಸಿ ಎಂಬುದು ಕೇವಲ ಒಂದು ಅಭಿಯಾನವಲ್ಲ,ಇದು ಬೆಂಗಳೂರಿನ ಭವಿಷ್ಯವನ್ನು ಉಳಿಸುವ ಜನಾಂದೋಲನವಾಗಿದೆ,
ನಮ್ಮ ನಗರ ನಮ್ಮ ಜವಾಬ್ದಾರಿ ನಮ್ಮ ಭವಿಷ್ಯ ಬೆಂಗಳೂರು ಉಳಿದರೆ ನಾವು ಉಳಿಯುತ್ತೇವೆ,ಬೆಂಗಳೂರು
ಬೆಳೆದರೆ ನಾವು ಬೆಳೆಯುತ್ತೇವೆ ಎಂದು ಆಪ್ ತಿಳಿಸಿದೆ.
