ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಜಾನಪದ ಪ್ರಾಧ್ಯಾಪಕರಾದ ಡಾ. ನಂಜಯ್ಯ ಹೊಂಗನೂರು ಅವರನ್ನು ಕನ್ನಡ ಜಾನಪದ ಪರಿಷತ್ ವತಿಯಿಂದ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಅಭಿನಂದಿಸಿದರು
ಈ ಸಂದರ್ಭದಲ್ಲಿ ಜೇಶಂಪ ಅವರ ನೆನಪಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸಮರ್ಪಕವಾಗಿ ಆಯೋಜಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಈ ವೇಳೆ ಪ್ರಾಧ್ಯಾಪಕರಾದ ಪ್ರೊ. ಗೌರೀಶ್, ಜಾನಪದ ಯುವ ಬ್ರಿಗೇಡ್ ಮೈಸೂರು ಜಿಲ್ಲಾ ಸಂಚಾಲಕರಾದ ಅಕ್ಷಯ್ ಪಾಟೀಲ್, ನಿತಿನ್, ಪ್ರಮೋದ್ ಮತ್ತಿತರರು ಹಾಜರಿದ್ದರು.
