ಮೈಸೂರು: ಡಾ. ಗಂಗೂಭಾಯಿ ಹಾನಗಲ್ ಪ್ರದರ್ಶನ ಕಲೆಗಳು ಹಾಗೂ ಸಂಗೀತ ವಿವಿ ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿರುವ ಡಾ. ರಾಮಕೃಷ್ಣಯ್ಯ ಅವರನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಅಭಿನಂದಿಸಿದರು.
ಕುಲಪತಿಗಳ ಕಾರ್ಯಾಲಯದಲ್ಲೇ ಬಾಲಾಜಿ ಅವರು ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತಿನ ವಿವಿಧ ಚಟುವಟಿಕೆಗಳು, ರಾಜ್ಯದ ಜಾನಪದ ಕಲೆಯ ಬೆಳವಣಿಗೆ, ಕಲಾವಿದರ ಸ್ಥಿತಿ ಹಾಗೂ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯತೆ ಕುರಿತು ಚರ್ಚಿಸಿದರು.
ವಿಶ್ವವಿದ್ಯಾಲಯ ಮತ್ತು ಪರಿಷತ್ಗಳ ಸಹಕಾರದಿಂದ ಜಾನಪದ ಕಲೆಗಳಿಗೆ ಹೊಸ ಉತ್ತೇಜನ ನೀಡಲು ಸಾಧ್ಯವೆಂಬ ಅಭಿಪ್ರಾಯ ಪಟ್ಟರು.
ಡಾ. ರಾಮಕೃಷ್ಣಯ್ಯ ಅವರು ಜಾನಪದ ಕಲೆಗಳ ಮಹತ್ವವನ್ನು ಒತ್ತಿಹೇಳಿ, ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ವತಿಯಿಂದ ಮುಂದಿನ ದಿನಗಳಲ್ಲಿ ಸಂಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಮಾತುಕತೆ ನಡೆಸಲಾಯಿತು.
ಈ ವೇಳೆ ಜಾನಪದ ಯುವ ಬ್ರಿಗೇಡ್ ಮೈಸೂರು ಜಿಲ್ಲಾ ಸಂಚಾಲಕ ಅಕ್ಷಯ್ ಪಾಟೀಲ್, ನಿತಿನ್, ಉಪಸ್ಥಿತರಿದ್ದರು.
