ಮೈಸೂರು: ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಅವಧಿಯ ದಾಖಲೆ ಮುರಿದು ಸತತವಾಗಿ ದೇಶದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ನರೇಂದ್ರ ಮೋದಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಯುಕ್ತ ಮೈಸೂರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಚಾಮುಂಡಿಪುರಂನಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಸಿಹಿ ಹಂಚಿ ಹಲವಾರು ಅಭಿಮಾನಿಗಳು ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮೈಸೂರು ನಗರದ ನಿಕಟಪೋರ್ವ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್,
ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲ್ ಗಲ್ಲು ಸ್ಥಾಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್ ,ಅಪೂರ್ವ ಸುರೇಶ್,ಸಮಾಜ ಸೇವಕರಾದ ದೂರ ರಾಜಣ್ಣ, ಕದಂಬ ಸೇನೆ ನಗರ ಜಿಲ್ಲಾಧ್ಯಕ್ಷರಾದ ಶಿವರಾಜ್ ,ದಯಾನಂದ ನಾಯಕ್, ಪುಟ್ಟರಾಜು,ಪುರುಷೋತ್ತಮ್, ರಾಮಚಂದ್ರು, ನಿವೃತ್ತ ಶಿಕ್ಷಕರು ಮಾದೇವಸ್ವಾಮಿ ಮತ್ತಿತರರು ಸಂಭ್ರಮದಲ್ಲಿ ಭಾಗವಹಿಸಿದ್ದರು.
