ಮೈಸೂರು: ಮೈಸೂರಿನ ಲಕ್ಷ್ಮಿಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ
ಟಿ.ಸಿ.ಸುದೀಪ್ ಮತ್ತು ಹೆಚ್.ಡಿ. ಕೋಟೆ
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹನುಮಂತ ರಾವ್ ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ.
ಈ ಇಬ್ಬರು ಪ್ರಾಂಶುಪಾಲರು ಕ್ರಮವಾಗಿ ಯಾದಗಿರ್ ಮತ್ತು ಬಳ್ಳಾರಿ ಜಿಲ್ಲೆಗೆ ಬಡ್ತಿ ಪಡೆದಿದ್ದಾರೆ.
ಹಾಗಾಗಿ ಅವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಮೈಸೂರು ಜಿಲ್ಲೆ ಸಂಘದ ವತಿಯಿಂದ ಹಮ್ಮಿಕೊಳ್ಳಲಾಯಿತು.
ಈ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರಾದ ಎಂ.ಪಿ ನಾಗಮ್ಮ ಮತ್ತು ಪ್ರಾಂಶುಪಾಲ ಸಂಘದ ಪದಾಧಿಕಾರಿಗಳಾದ ರವೀಶ್, ರಾಮೇಗೌಡ ,ಡಾ. ಎಮ್.ಜಿ.ರಮಾನಂದ್, ವಿಷಕಂಠ ಮೂರ್ತಿ, ಚಂದ್ರಶೇಖರ್, ನಂಜನಗೂಡು ನೋಡಲ್ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್,ಟಿ. ನರಸಿಪುರದ ಲಿಂಗರಾಜು, ಹುಣಸೂರಿನ ಸುಧಾ, ಪಿರಿಯಪಟ್ಟಣದ ದಿನೇಶ್ ಡಿ.ಎ ಹಾಗೂ ಪ್ರಾಂಶುಪಾಲರಾದ ಎನ್ ಎಮ್, ವಿಜೇಂದ್ರ ಕುಮಾರ್, ರವಿಶಂಕರ್ ಉದಯಶಂಕರ್, ರಾಜೇಶ್ ಉಪಸ್ಥಿತರಿದ್ದರು.
