(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಮನುಷ್ಯರು ಆರೋಗ್ಯವಾಗಿರ ಬೇಕೆಂದರೆ ಉತ್ತಮ ಪರಿಸರ ಸಿಗಬೇಕು ಎಂದು ಹಿರಿಯ ಸಿವಿಲ್ ನ್ಯಾಯದೀಶರಾದ ಸುನೀತಾ ಅವರು ತಿಳಿಸಿದರು.
ಪಟ್ಟಣದ ನ್ಯಾಷಿನಲ್ ಶಾಲೆ ಮೈದಾನದಲ್ಲಿರುವ ಸಾವಿತ್ರಿ ಬಾಯಿ ಪುಲೆ ರಂಗ ಮಂದಿರದಲ್ಲಿ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಪೀಪಲ್ ಫಾರ್ ಫಾರೆಸ್ಟ್ ಮತ್ತು ವೈಲ್ಡ್ ಲೈಫ್ ಕನ್ಸ್ ರ್ವೇಷನ್ ಆಫ್ ಕರ್ನಾಟಕ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ, ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಗಿಡಗಳ ನಾಶ, ಆರಣ್ಯ ನಾಶದಿಂದ ಪರಿಸರ ನಾಶವಾಗುತ್ತಿದೆ. ಮನುಷ್ಯರು ಆರೋಗ್ಯವಾಗಿ ಇರಬೇಕು ಎಂದರೆ ಉತ್ತಮ ಪರಿಸರ ಸಿಗಬೇಕು. ಆದ್ದರಿಂದಲೇ ಅರಣ್ಯ ಇಲಾಖೆ ವತಿಯಿಂದ ಪರಿಸರ ಜಾಗೃತಿ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರತೀ ವರ್ಷ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಒಂದೊಂದು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೊದಲೆಲ್ಲ ಕಾರ್ಯಕ್ರಮಗಳಲ್ಲಿ ಹೂ ಬುಟ್ಟಿಗಳನ್ನು ಕೊಡುತ್ತಿದ್ದರು ಆದರೆ ಈಗ ಪ್ಲಾಂಟ್ ಗಳನ್ನು ಕೊಡುತ್ತಾರೆ ಕಾರಣ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಆದ್ದರಿಂದ ಎಲ್ಲರು ಕೂಡ ಅರಣ್ಯವನ್ನು ರಕ್ಷಿಸಿ ಬೆಳೆಸಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿ ನಮ್ಮ ಮಂದಿನ ಪೀಳಿಗೆಗೆ ಕೊಡುಗೆ ನೀಡಬೇಕು ಎಂದು ಸುನೀತಾ ತಿಳಿ ಹೇಳಿದರು.
ಮಹದೇಶ್ವರ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ಮಾತನಾಡಿ, ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸಬೇಕಾಗಿದೆ ಪರಿಸರ ಉಳಿಯ ಬೇಕಾದರೆ ಅರಣ್ಯವನ್ನು ರಕ್ಷಿಸಬೇಕು ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಅರಣ್ಯ ಪರಿಸರ ಇದೆ, ಆದ್ದರಿಂದ ನಮ್ಮ ಜಿಲ್ಲೆಯ ವನಸಿರಿಯನ್ನು ನೋಡಲು ತುಂಬಾ ಜನ ಪ್ರವಾಸಿಗರು ಬರುತ್ತಾರೆ ಅಷ್ಟು ಸುಂದರವಾದ ಅರಣ್ಯ ನಮ್ಮ ಭಾಗದಲ್ಲಿ ಇದೆ, ನಾವೆಲ್ಲರೂ ಪರಿಸರವನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುವುದರಿಂದ ಪರಿಸರ ಹಾಳಾಗುತ್ತಿದೆ ಪ್ಲಾಸ್ಟಿಕ್ ಮಣ್ಣಿನಲ್ಲಿ ಬೇಗ ಕೊಳೆಯುವುದಿಲ್ಲ ಅದ್ದರಿಂದ ಅದು ವಿಷವಾಗಿ ಮಾರ್ಪಟ್ಟು ಪರಿಸರದಲ್ಲಿ ಹಾಗೂ ನಾವು ಸೇವಿಸುವ ಆಹಾರದಲ್ಲಿ ಬೆರೆತು ನಮ್ಮ ಜೀವಕ್ಕೆ ಹಾನಿ ಮಾಡುತ್ತದೆ, ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಿ ಉತ್ತಮ ಪರಿಸರವನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಸತ್ರ ನ್ಯಾಯದೀಶರಾದ ಟಿ. ಸಿ. ಶ್ರೀಕಾಂತ್,ಮಲೈ ಮಹದೇಶ್ವರ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಬಿ.,ಪ್ರಧಾನ ಸಿವಿಲ್ ನ್ಯಾಯದೀ ಶರಾದ ಎಂ. ಕಾವ್ಯ,ಅಪರ ಸಿವಿಲ್ ನ್ಯಾಯದೀಶರಾದ ಎಂ. ರಂಜಿತ್ ಕುಮಾರ್, ವಕೀಲ ಡಿ. ವೆಂಕಟಾಚಲ, ಬಫರ್ ವಲಯ ಅರಣ್ಯಾಧಿಕಾರಿ ರವಿಕುಮಾರ್, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಮೇಘನಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ,ವಕೀಲರಾದ ವೆಂಕಟಾಚಲ, ಪತ್ರಕರ್ತರಾದ ಜಾನ್ ಪೀಟರ್ ಮತ್ತಿತರರು ಹಾಜರಿದ್ದರು.
