ಮೈಸೂರು: ಇಂದಿನಿಂದ ಶಾಲೆಗಳು ಪುನರಾರಂಭವಾಗಿದ್ದು,ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯನ್ನು ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಶಾಲೆಗೆ ಆಗಮಿಸಿದ ಮಕ್ಕಳನ್ನು ಆರತಿ ಬೆಳಗಿ,ಪುಷ್ಪವೃಷ್ಟಿ ಸುರಿಸಿ,ಸಿಹಿ ವಿತರಿಸಿ ಹೂಗೊಚ್ಚ ನೀಡಿ ಗುರುಗಳು ಸಂಭ್ರಮದಿಂದ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಹಳೆಯ ವಿದ್ಯಾರ್ಥಿನಿ ರಮ್ಯಾ
ಅವರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಪೌಚ್, ಪೆನ್ನು, ಪೆನ್ಸಿಲನ್ನು ಕೊಡುಗೆ ನೀಡಿದರು.
ಈ ವೇಳೆ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್,ಕೆಪಿಸಿಸಿ ಸದಸ್ಯನಜರ್ಬಾದ್ ನಟರಾಜ್, ರವಿ ಶಾಸ್ತ್ರಿ,ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಶಿಕ್ಷಕರಾದ ಶಿವಯ್ಯ , ಸಹ ಶಿಕ್ಷಕಿ
ಕುಮಾರಿ ಶಿಲ್ಪ, ನಾಗರತ್ನ ,ದಳವಾಯಿ ಪ್ರೌಢಶಾಲೆ ಮಹಾದೇವ ,ಶಿಕ್ಷಕಿ ಮಮತಾ ಕುಮಾರಿ ,ಹಳೆಯ ವಿದ್ಯಾರ್ಥಿನಿ ರಮ್ಯಾ,ಎಸ್ ಎನ್ ರಾಜೇಶ್ ,ಶಿವಲಿಂಗ ಸ್ವಾಮಿ,ಜತ್ತಿ ಪ್ರಸಾದ್ ಮತ್ತಿತರರು ಹಾಜರಿದ್ದರು.
