ಯಳಂದೂರು: ಡಿ.ಕೆ ಶಿವಕುಮಾರ್ ಅವರ ಸಂಪುಟದಲ್ಲಿ ದಲಿತ ಸಮುದಾಯದ ನಾಯಕರಾದ ಹೆಚ್ ಸಿ ಮಹದೇವಪ್ಪ ನವರಿಗೆ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಶಾಸಕ ಎ ಆರ್ ಕೃಷ್ಣಮೂರ್ತಿ ಅವರಿಗೆ ಸಚಿವಸ್ಥಾನ ನೀಡಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಕೆಸ್ತೂರು ಸಿದ್ದರಾಜು ಒತ್ತಾಯಿಸಿದರು.
ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕು ಅಂಬೇಡ್ಕರ್ ಸೇವಾಸಮಿತಿ, ಎ ಅರ್ ಕೃಷ್ಣಮೂರ್ತಿ ಅಭಿಮಾನಿಗಳ ಬಳಗ, ಹೆಚ್ ಸಿ ಮಹದೇವಪ್ಪ ಅಭಿಮಾನಿಗಳ ಬಳಗ ಹಾಗೂ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ಒತ್ತಾಯ ಮಾಡಿದರು.
ಹೆಚ್ ಸಿ ಮಹದೇವಪ್ಪನವರು ಮೈಸೂರು ಪ್ರಾಂತ್ಯದಲ್ಲಿ ಅಹಿಂದ ವರ್ಗಗಳನ್ನು ಒಗ್ಗೂಡಿಸಿ ಸೇವಾ ಕಾರ್ಯಗಳನ್ನು ಮಾಡುತ್ತಿದ್ದ ನಮ್ಮ ನಾಯಕರಾಗಿದ್ದಾರೆ ಹಾಗಾಗಿ ಹೆಚ್ ಸಿ ಮಹದೇವಪ್ಪನವರಿಗೆ ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಹಾಗೂ ಕೊಳ್ಳೇಗಾಲ ಕ್ಷೇತ್ರ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಅವರು ಅಭಿವೃದ್ಧಿ ಮಾಡುತ್ತಿದ್ದು ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಎ ಆರ್ ಕೆ ಅವರಿಗೆ ಸಚಿವಸ್ಥಾನ ನೀಡಿದರೆ ಜಿಲ್ಲೆಯಲ್ಲಿ ಪಕ್ಷ ಸುಭದ್ರವಾಗಿ ಬಲಗೊಳ್ಳುತ್ತದೆ ಹಾಗೂ ಪಕ್ಷ ಸಂಘಟನೆಯು ಪ್ರಬಲವಾಗುತ್ತದೆ ಅದ್ದರಿಂದ ಸವರಿಗೆ ಸಚಿವಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪ್ರಧಾನಕಾರ್ಯಧರ್ಶಿ ಯರಿಯೂರು ನಟರಾಜು, ಉಪಾಧ್ಯಕ್ಷ ನಟರಾಜು, ತಾ.ಪಂ ಮಾಜಿ ಅಧ್ಯಕ್ಷ ಎಂ ನಿರಂಜನ್, ಮದ್ದೂರು ಚಕ್ರವರ್ತಿ, ಕೆಸ್ತೂರು ಮಧು ,ಗುಂಬಳ್ಳಿ ಮಹದೇವ, ಹೆಚ್ ಆರ್ ನಾಗಾರಾಜು, ವೈಕೆ ಮೋಳೆ ಬಿ ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡ ವೆಂಕಟೇಶ್, ಸೇರಿದಂತೆ ಅಭಿಮಾನಿಗಳು ಹಾಜರಿದ್ದರು.
