ಮೈಸೂರು: ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 34ರ ವಿಟಿಯು ಕಾಲೇಜು ಮುಖ್ಯರಸ್ತೆಯಲ್ಲಿ ಕೆಲವರು ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಲು ಮುಂದಾಗಿದ್ದು ಕೂಡಲೇ ಇದನ್ನು ತಡೆಯಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಹಾನಗರ ಪಾಲಿಕೆಯ ವಲಯ 9ರ ಆಯುಕ್ತರಿಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಮಂಜುನಾಥ್, ಮುಖಂಡರಾದ ಹೆಚ್.ಜಿ. ಗಿರಿಧರ್, ಜಿ . ಬಿ ಆನಂದ ಅವರ ನಿಯೋಗ ಮನವಿ ಸಲ್ಲಿಸಿತು.
ಅನಧಿಕೃತ ಕಟ್ಟಡದ ಬಗೆ ಪರಿಶೀಲಿಸಿ ನಿರ್ಮಾಣ ಕಾರ್ಯವನ್ನು ನಿಲಿಸಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜೇಂದ್ರ, ಮಣಿರತ್ನಂ, ನಾಗರಾಜ್, ಮುದ್ದಪ್ಪ, ಸ್ವಾಮಿ, ಪದ್ಮನಾಭ, ಶಾಂತಕುಮಾರ್, ಧರ್ಮರಾಜ್ ಹಾಜರಿದ್ದರು.
ಸಾತಗಳ್ಳಿ ಗ್ರಾಮ ಕಸಬಾ ಹೋಬಳಿ ಸರ್ವೆ ನಂಬರ್ 66 ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗವಾಗಿದೆ. ಅದೇ ಗ್ರಾಮ ಸರ್ವೆ ನಂಬರ್ 55 / 2 ಖಾಸಗಿ ಆಸ್ತಿಯಾಗಿದೆ.ಆ ಜಾಗದಲ್ಲಿ ರವಿನ್ಯೂ ಸೈಟುಗಳನ್ನು ಮಾಡಿ ಹಂಚಿಕೆ ಮಾಡಿ ಅದರಲ್ಲಿ ಮನೆಗಳು ನಿರ್ಮಾಣವಾಗುತ್ತಿವೆ ಎಂದು ಬಿಜೆಪಿ ನಿಯೋಗ ತಿಳಿಸಿದೆ.
ಸರ್ವೇ ನಂಬರ್ 66 ರಲ್ಲಿ ಬರುವ ಮುಖ್ಯರಸ್ತೆಯ ರಿಂಗ್ ರಸ್ತೆಯಿಂದ ಡಾಕ್ಟರ್ ರಾಜಕುಮಾರ್ ರಸ್ತೆಗೆ ಹೋಗುವ ಬಲ ಭಾಗದ ಕೆಲವು ಭಾಗದಲ್ಲಿ 20 ಅಡಿ, ಕೆಲವು ಭಾಗದಲ್ಲಿ 30,ಕೆಲವು ಭಾಗದಲ್ಲಿ 50 ಅಡಿ ರೋಡ್ ಇಂದ ಇರುವುದು ತಿಳಿದು ಬರುತ್ತದೆ ಸರ್ವೇ ನಂಬರ್ 55 /2 ಸಂಬಂಧಪಟ್ಟ ಮಾಲೀಕರು ಒತ್ತುವರಿ ಮಾಡಿ ಅದನ್ನು ನಿವೇಶನವಾಗಿ ಪರಿವರ್ತಿಸಿದ್ದಾರೆ ಎಂದು ನಿಯೋಗ ದೂರಿದೆ.
ಅಲ್ಲಿ ಈಗಾಗಲೇ ಎರಡು ಕಟ್ಟಡಗಳು ನಿರ್ಮಾಣವಾಗಿದ್ದು ಮತ್ತೊಂದು ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ನಿರ್ಮಾಣ ಮಾಡಿರುವ ಕಟ್ಟಡವನ್ನು ಸರ್ಕಾರ ವಶಪಡಿಸಿಕೊಂಡು ನಿರ್ಮಾಣ ಹಂತದಲ್ಲಿರುವ ಕಟ್ಟಡ ತಡೆಗಟ್ಟಬೇಕು ಹಾಗೂ ರೆವಿನ್ಯೂ ನಿವೇಶನಗಳ ಮನೆ ನಿರ್ಮಾಣಕ್ಕೆ ತಡೆ ನೀಡಬೇಕು, ಸರ್ಕಾರದ ಆಸ್ತಿಯನ್ನು ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
