ಮೈಸೂರು: ಸಾರ್ವಜನಿಕರು ತಮ್ಮ ಸಂಚಾರ ಸಮಸ್ಯೆಗಳು, ಕುಂದುಕೊರತೆಗಳು ಮತ್ತು ಸುಧಾರಣಾ ಸಲಹೆಗಳನ್ನು ಮುಕ್ತವಾಗಿ ತಿಳಿಸಲು ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಪೊಲೀಸ್ ಉಪ ಆಯುಕ್ತ ಸುಂದರ್ ರಾಜ್ ಅವರು ಸಕ್ರಿಯವಾಗಿ ಸ್ಪಂದಿಸಿದರು.
ನರಸಿಂಹರಾಜ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಡಿಸಿಪಿ ಸುಂದರ್ ರಾಜ್ ಪಾಲ್ಗೊಂಡು ಜನರ ಅಹವಾಲು ಆಲಿಸಿದರು.
ನಾಗರಿಕರು ಸಭೆಯ ಗಮನಕ್ಕೆ ತಂದ ಪ್ರತಿಯೊಂದು ವಿಷಯವನ್ನು ಅಧಿಕಾರಿಗಳು
ಸೌಜನ್ಯದಿಂದ ಆಲಿಸಿ, ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಮಾರ್ಗದರ್ಶನ ಕೂಡಾ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಪಾಲನೆ ಹಾಗೂ ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು. ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ವಿಷಯಗಳ ಕುರಿತು ನಾಗರಿಕರು ತಮ್ಮ,ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಂಚಾರ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ನಾಗರಿಕರು ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ವೇಳೆ ಡಿಸಿಪಿ ಸುಂದರ್ ರಾಜ್ ಭರವಸೆ ನೀಡಿದರು
