ಯಳಂದೂರು: ಸಮಾಜದಲ್ಲಿ ನಮ್ಮ ಹಕ್ಕುಗಳು ಮತ್ತು ನಾಡಿನ ಇತಿಹಾಸ ತಿಳಿದುಕೊಳ್ಳಬೇಕಾದರೆ ನಮಗೆ ಶಿಕ್ಷಣ ಅತ್ಯಗತ್ಯ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಉಪ್ಪಾರ ಸೇನಾ ಸಮಿತಿ ಮತ್ತು ತಾಲ್ಲೂಕು ಉಪ್ಪಾರರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಮೊದಲು ಶಿಕ್ಷಣವನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.
ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತ್ಯುನ್ನತ ಸ್ಥಾನದ ಪಡೆದ ತಾಲ್ಲೂಕಿನ 62 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಶಾಸಕರು, ನಿಮ್ಮ ಮುಂದಿನ ವಿದ್ಯಾಬ್ಯಾಸ ಉತ್ತಮವಾಗಿರಲಿ ಹಾರೈಸಿದರು.
ಇದು ಸ್ಪರ್ಧಾತ್ಮಕ ಯುಗ.ಈ ಯುಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳುತ್ತಾರೆ ವಿದ್ಯೆ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದರೆ ಹುಲಿಯಂತೆ ಘರ್ಜಿಸಬಹುದು. ಆರ್ಥಿಕ, ಸಾಮಾಜಿಕ ರಾಜಕೀಯವಾಗಿ ಸಮಾನತೆ ಪಡೆಯಬೇಕಾದರೆ ಶಿಕ್ಷಣದ ಜ್ಞಾನ ಅಮೂಲ್ಯವಾಗಿದೆ ನಮ್ಮ ಸಂವಿಧಾನವು ನಮ್ಮ ರಾಷ್ಟ್ರದ ಪ್ರಮುಖ ಗ್ರಂಥವಾಗಿದೆ ಎಲ್ಲಾ ವರ್ಗದವರು ಕೂಡ ಸಮಾಜದಲ್ಲಿ ಸಮಾನತೆಯಿಂದ ಇರಬೇಕು ಎಂದು ತಿಳಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಐ ಎ ಎಸ್, ಐ ಪಿ ಎಸ್ ,ಐ ಎಫ್ ಎಸ್ ಹುದ್ದೆಗಳನ್ನು ಪಡೆದು ಸಮಾಜಕ್ಕೆ ಸಮುದಾಯಕ್ಕೆ ಮಾರ್ಗದರ್ಶಕರಾಗಬೇಕು.
ಬಾಲ್ಯವಿವಾಹ ಮತ್ತು ಕೆಲವು ಅನಿಷ್ಟ ಪದ್ದತಿಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಿ ಅವರಿಗೆ ಶಿಕ್ಷಣವನ್ನು ನೀಡಬೇಕು,
ಉಪ್ಪಾರ ಸಮುದಾಯದ ಸಾಕ್ಷರತೆ ಪ್ರಮಾಣ ಪ್ರತಿ ವರ್ಷವು ಹೆಚ್ಚಾಗಬೇಕಾಗಿದೆ ಎಂದು ಶಾಸಕ ಕೃಷ್ಣಮೂರ್ತಿ ತಿಳಿಸಿದರು.
ಡಿ ಜಗನ್ನಾಥ ಸಾಗರ್ ತಾಂತ್ರಿಕ ಸದಸ್ಯರು ಮಾತನಾಡಿ ಉಪ್ಪಾರ ಸಮುದಾಯವು ಹಿಂದುಳಿದ ವರ್ಗಗಳಲ್ಲಿರುವ ಒಂದು ಸಮುದಾಯವಾಗಿದೆ ಇಂದು ರಾಜ್ಯದಲ್ಲಿ ಆರ್ಥಿಕವಾಗಿ ಸಾಮಾಜಿಕ ಶೈಕ್ಷಣಿಕವಾಗಿ ನಾವು ಇನ್ನೂ ಮುಂದೆ ಬರಬೇಕಾಗಿದೆ ನಮಗೆ ಮೀಸಲಾತಿ ಕಲ್ಪಿಸಿದ ಡಾ ಬಿ ಆರ್ ಅಂಬೇಡ್ಕರ್ ಮತ್ತು ಡಿ ದೇವರಾಜ್ ಅರಸು, ಹಾವನೂರು ಅವರನ್ನು ಸ್ಮರಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಯ್ಯನಸರಗೂರು ಮಠದ ಮಹದೇವಸ್ವಾಮಿಗಳು, 88 ಗಡಿಮನೆ ಪೀಠದ ಮಂಜುನಾಥಸ್ವಾಮಿಗಳು, ತಾಲ್ಲೂಕು ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರಾದ ಕುಸುಮರಾಜ್, ಜಿಪಂ ಮಾಜಿ ಉಪಾಧ್ಯಕ್ಷ ಜೆ ಯೋಗೇಶ್, ನಿವೃತ್ತ ಪ್ರಾಂಶುಪಾಲರಾದ ಸೋಮಣ್ಣ, ಉಪ್ಪಾರ ಸೇನಾ ಸಮಿತಿ ಅಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಕೆಸ್ತೂರು ಸಿದ್ದಪ್ಪಸ್ವಾಮಿ, ಗೌಡಹಳ್ಳಿ ಮಹೇಶ್ ,ಶಿವಕುಮಾರ್, ದುಗ್ಗಹಟ್ಟಿ ಮಾದೇಶ್, ಕಂದಹಳ್ಳಿ ನಂಜುಂಡಸ್ವಾಮಿ, ಉಪಾಧ್ಯಕ್ಷ ಶಿವರಾಜ್ ನಂಜರಾಜ್.ನವೀನ್ ,ಶಿವು,ಮಂಜುಕುಮಾರ್ ,ಗೋವಿಂದ್,ಅನಂತು ಮತ್ತಿತರರು ಪಾಲ್ಗೊಂಡಿದ್ದರು.
