(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಚಾ.ನಗರ ವತಿಯಿಂದ ಆಯೋಜಿಸಲಾಗಿದ್ದ ಕ್ರಿಶ್ಚಿಯನ್ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಮೆಟ್ಟಲವಾಡಿ ಸಿಎಸ್ಐ ಚರ್ಚ್ ತಂಡ ಜಯಗಳಿಸಿದೆ.
ಎರಡನೇ ಸ್ಥಾನವನ್ನು ಕೊಳ್ಳೇಗಾಲ ಬೆತೆಲ್ ಲೂಥರನ್ ಚರ್ಚ್ ತಂಡ ಪಡೆದುಕೊಂಡಿತು.
ಕ್ರೀಡಾಕೂಟವನ್ನು ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯದ ಧರ್ಮಗುರು ಫಾಧರ್ ಎಂ.ರಾಯಪ್ಪ ಅವರು ಉದ್ಘಾಟಿಸಿದರು.
ಈ ವೇಳಡ ಮಾತನಾಡಿದ ಅವರು, ಚಾ.ನಗರ ಕ್ಯಾಥೊಲಿಕ್ ಅಸೋಸಿಯೇಷನ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯ ಮೂಲಕ ಎಲ್ಲಾ ಕ್ರಿಸ್ತ ಮಕ್ಕಳನ್ನು ಒಗ್ಗೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಕ್ರೈಸ್ತ ಮಕ್ಕಳು ಒಟ್ಟಾಗಿರಬೇಕು ಎಂಬುದು ಕ್ರಿಕೆಟ್ ಪಂದ್ಯಾವಳಿಯ ಮೂಲ ಉದ್ದೇಶವಾಗಿದೆ. ಅದಕ್ಕಾಗಿ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡಾಪಟುಗಳನ್ನು ಸೇರಿಸಿರುವುದು ಸಂತಸದ ವಿಷಯವಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಇತರರಿಗೆ ಮಾದರಿಯಾಗಿ ಸಹೋದರತ್ವವನ್ನು ಎತ್ತಿ ಹಿಡಯಬೇಕು ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಬೆತೆಲ್ ಲೂಥರನ್ ಚರ್ಚ್ ರೆ. ಜೋಶುವ ಪ್ರಸನ್ನಕುಮಾರ್ ಮಾತನಾಡಿ, ಪಂದ್ಯಾವಳಿಯಲ್ಲಿ ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಪಂದ್ಯಾವಳಿಯಲ್ಲಿ ಜಿಲ್ಲೆಯ 16 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಅಂತಿಮವಾಗಿ ಮೆಟ್ಟಲವಾಡಿ ಸಿಎಸ್ಐ ಚರ್ಚ್ ತಂಡ ಜಯಗಳಿಸಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ.
ಎರಡನೇ ಸ್ಥಾನವನ್ನು ಕೊಳ್ಳೇಗಾಲ ಬೆತೆಲ್ ಲೂಥರನ್ ಚರ್ಚ್ ತಂಡ ಪಡೆದುಕೊಂಡಿದೆ.
ವಿಜೇತ ತಂಡಕ್ಕೆ 15 ಸಾವಿರ ಮತ್ತು ಟ್ರೋಫಿ, ಎರಡನೇ ಸ್ಥಾನ ಪಡೆದುಕೊಂಡ ತಂಡಕ್ಕೆ 10 ಸಾವಿರ ಮತ್ತು ಟ್ರೋಫಿ ಹಾಗೂ ಪ್ರತಿ ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಮ್ಯಾನ್ ಆಫ್ ದಿ ಸಿರೀಸ್ ಮತ್ತು ಬೆಸ್ಟ್ ಬೌಲರ್, ಬ್ಯಾಟ್ಮ್ಯಾನ್ ಗಳಿಗೆ ಬಹುಮಾನ ನೀಡಲಾಯಿತು.
ಈ ವೇಳೆ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗ್ರೆಸ್, ನಗರಸಭೆ ಮಾಜಿ ಅಧ್ಯಕ್ಷ ಬಸ್ತೀಪುರ ಶಾಂತರಾಜು, ನಾಮ ನಿರ್ದೇಶಿತ ಸದಸ್ಯ ಆನಂದ್ ಜೋಶಿ, ಚಾಮರಾಜನಗರ ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಅಧ್ಯಕ್ಷ ಡೇವಿಡ್ ಡಿ.ಜಿ, ನಿರ್ದೇಶಕ ಮರಿಯ ಜೋಸೇಫ್, ಮಾಜಿ ನಗರಸಭಾಧ್ಯಕ್ಷ ಸೆಲ್ವರಾಜು, ಕ್ರೈಸ್ತ ಒಕ್ಕೂಟದ ಉಪಾಧ್ಯಕ್ಷರು ಜಾನ್ ಪೀಟರ್, ಕಿರಣ್ ಕುಮಾರ್.ಎಸ್, ಜಯಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

