ಬೆಂಗಳೂರು: ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರಿಗೆ
ಕಾಂಗ್ರೆಸ್ ಮುಖಂಡರು ಜನುಮ ದಿನದ ಶುಭ ಕೋರಿದರು.
ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿರುವ ಕ್ಯಾಬಿನೆಟ್ ಹಾಲ್ ಮುಂಭಾಗ ಭೇಟಿ ಮಾಡಿ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರು ನಗರ ಕಾಂಗ್ರೆಸ್(ಒಬಿಸಿ) ಉಪಾಧ್ಯಕ್ಷರಾದ ರಾಮಪ್ಪ ರಮೇಶ್,ಕಾಂಗ್ರೆಸ್ ವಕ್ತಾರರಾದ ಶ್ರೀನಿವಾಸ್, ಡಿ ಕೆ ಅಭಿಮಾನಿ ಬಳಗದ ಸಂಚಾಲಕರಾದ ದಿನೇಶ್,ವಕೀಲರಾದ ವಿನಯ್ ಕುಮಾರ್ ಅವರುಗಳು ಡಿ.ಕೆ.ಶಿವಕುಮಾರ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭ ಹಾರೈಸಿದರು.
