ಮೈಸೂರು: ಕನಕಶ್ರೀ ಚಾರಿಟಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
ಮೈಸೂರಿನ ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ
ಬಿ ಸುಬ್ರಹ್ಮಣ್ಯ ಹಾಗೂ ಟ್ರಸ್ಟ್ ನ ಅಧ್ಯಕ್ಷ ಟಿ.ಬಿ.ಬಳಗಾವಿ,ಕಾರ್ಯದರ್ಶಿ ಪಿ.ಎನ್.ಕೃಷ್ಣಮೂರ್ತಿ, ಖಜಾಂಚಿ ಎಂ.ಪ್ರಕಾಶ್ ಈ ಕುರಿತು ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 90 ಅಂಕಗಳು ಮತ್ತು ಅದಕ್ಕಿಂತಲೂ ಹೆಚ್ಚಿನ ಅಂಕಗಳನ್ನು (ಹಾಲುಮತ/ಕಾಡುಕುರುಬ/ಜೇನುಕುರುಬ) ಗಳಿಸಿದ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ 5000 ರೂ ನಗದು ಪ್ರೋತ್ಸಾಹಧನ ಮತ್ತು ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಲಾಗುವುದು ಎಂದು ಹೇಳಿದರು.
ಅಂಕಪಟ್ಟಿಯ ದೃಢೀಕೃತ ನಕಲು ಪ್ರತಿ, ವರ್ಗಾವಣೆ ಪ್ರಮಾಣ ಪತ್ರ (T.C.) ಅಥವಾ ಜಾತಿ ಪ್ರಮಾಣ ಪತ್ರದ (ಪ್ರವರ್ಗ-ಎ) ದೃಢೀಕೃತ ನಕಲು ಪ್ರತಿ, ವಿದ್ಯಾರ್ಥಿಯ ಆಧಾರ್ ಕಾರ್ಡ್ ನಕಲು ಪ್ರತಿ ಮತ್ತು ಭಾವಚಿತ್ರದೊಂದಿಗೆ ತಂದೆತಾಯಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ವಿದ್ಯಾರ್ಥಿಯು ಗಳಿಸಿದ ಒಟ್ಟು ಅಂಕ, ಶೇಕಡಾವಾರು ಅಂಕ, ವಿದ್ಯಾಭ್ಯಾಸ ಮಾಡಿದ ಶಾಲೆಯ ಹೆಸರು, ವಿಳಾಸ ಮತ್ತು ಜಿಲ್ಲೆ ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು 8/06/2026 ರ ಒಳಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಸ್ವೀಕೃತಿ ಬಾಕಿ ಮೂಲಕ (Registered Post Acknowledgement Due) ಟಿ.ಬಿ.ಬಳಗಾವಿ,ಅಧ್ಯಕ್ಷರು,ಕನಕಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕೇರ್ ಆಫ್ ಕನಕಶ್ರೀ ಗೃಹ ನಿರ್ಮಾಣ ಸಹಕಾರ ಸಂಘ,
ನಂ.20/31, 6ನೇ ಮುಖ್ಯರಸ್ತೆ, 80 ಅಡಿ ರಸ್ತೆ, ಕೆ.ಹೆಚ್.ಬಿ ಕಾಲೋನಿ, 1ನೇ ಹಂತ. ಬಸವೇಶ್ವರನಗರ, ಬೆಂಗಳೂರು-560079, ದೂರವಾಣಿ ಸಂಖ್ಯೆ 080-23585684 ಇವರಿಗೆ ಸಲ್ಲಿಸುವಂತೆ ಕೋರಲಾಗಿದೆ.
ಈ ಪ್ರತಿಭಾ ಪುರಸ್ಕಾರ ಸಮಾರಂಭವನ್ನು 14.06.2026 ರಂದು ಭಾನುವಾರ ಮೈಸೂರಿನ ಸಿದ್ದಾರ್ಥನಗರದ ಕನಕ ಸಮುದಾಯ ಭವನದಲ್ಲಿ ನಡೆಸಲಾಗುವುದು. ಆಯ್ಕೆಗೊಳ್ಳುವ ವಿದ್ಯಾರ್ಥಿಗಳಿಗೆ ಆಹ್ವಾನ ಪತ್ರವನ್ನು ಮುಂಚಿತವಾಗಿ ಕಳುಹಿಸಲಾಗುವುದು ಎಂದು ತಿಳಿಸಿದರು.
ನಿಗಧಿತ ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಪಿ.ಎನ್. ಕೃಷ್ಣಮೂರ್ತಿ, 9483425046, 9845101696. .9448514217, ಶ್ರೀ ಸಿ. ಬಸವರಾಜು, ಟ್ರಸ್ಟಿ, ಮೊ.ಸಂ. 9448013559, ಪಿ. ರಂಗಧಾಮಯ್ಯ ಟ್ರಸ್ಟಿ, ಮೊ.ಸಂ. 9980804115 ಇವರುಗಳಲ್ಲಿ ಯಾರನ್ನಾದರೂ ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ವಿ.ಮುನಿಚೌಡಪ್ಪ,ಎಂ.ಮಹದೇವ್,ರಂಗ ರಾಮಯ್ಯ.ಪಿ,ಕೆ.ಜಯರಾಮು,ಸಿ.ಬಸವರಾಜು,ಎಚ್.ಆರ್.ಸಂಗಮದ ಮತ್ತಿತರರು ಉಪಸ್ಥಿತರಿದ್ದರು.
