ಇಸ್ರೇಲ್: ಅ.7ರ ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯ ಇನ್ನೊಬ್ಬ ರೂವಾರಿ ಹಮಾಸ್ ಸೇನಾ ಮುಖ್ಯಸ್ಥನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಹಲವು ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಹಮಾಸ್ ಸೇನಾ ಮುಖ್ಯಸ್ಥ ಇಜ್ಜೆದಿನ್ ಅಲ್-ಹದ್ದದ್ ನನ್ನು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಕೊನೆಗಾಣಿಸಿದೆ.
ಗಾಜಾ ನಗರ ಪ್ರದೇಶದಲ್ಲಿ ನಿನ್ನೆ ಐಡಿಎಫ್ ಮತ್ತು ಐಎಸ್ಎ ನಡೆಸಿದ ನಿಖರ ದಾಳಿಯಲ್ಲಿ ಭಯೋತ್ಪಾದಕ ಇಜ್ಜೆದಿನ್ ಅಲ್-ಹದ್ದದ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
ಇಸ್ರೇಲ್ ವಾಯು ದಾಳಿಯಲ್ಲಿ ಹದ್ದದ್ ಸಾವನ್ನಪ್ಪಿದ್ದಾನೆ ಎಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಹದ್ದದ್ ವಸತಿ ಅಪಾರ್ಟ್ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕ ಮಕ್ಕಳು ಸೇರಿದಂತೆ ಸಾವಿರಾರು ಜನರು ಹದ್ದದ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
