ನವದೆಹಲಿ: 2012 ರಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಇಡೀ ರಾಷ್ಟ್ರದಲ್ಲಿ ಭಾರೀ ಆಕ್ರೋಶ ಹುಟ್ಟಿ ಹಾಕಿತ್ತು.ಇದೀದ ಮತ್ತದೇ ರೀತಿ ಪ್ರಕರಣ ಮರುಕಳಿಸಿದೆ.
ನಿರ್ಭಯ ಪ್ರಕರಣ ಇನ್ನೂ ಜನರ ಮನಸ್ಸಿನಲ್ಲಿ ಹಸಿಯಾಗಿದೆ,ಆ ನೋವು ಮಾಸುವ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.
ಚಲಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ದೆಹಲಿಯ ನಂಗ್ಲೋಯಿಯಲ್ಲಿ ನಡೆದಿದೆ.
ಬಸ್ಸಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಬಸ್ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರನ್ನೂ ಬಂಧಿಸಿದ್ದಾರೆ.
ಸೋಮವಾರ ರಾತ್ರಿ 11 ಗಂಟೆಯ ವೇಳೆಯಲ್ಲಿ ಈ ಹೇಯ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಎಂದಿನಂತೆ ಕೆಲಸ ಮುಗಿಸಿ ಮಹಿಳೆ ಸರಸ್ವತಿ ವಿಹಾರ್ ಬಿ-ಬ್ಲಾಕ್ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂದು ಸ್ಲೀಪರ್ ಬಸ್ ಪಕ್ಕದಲ್ಲಿ ನಿಂತಿತ್ತು. ಬಸ್ಸಿನ ಬಾಗಿಲ ಬಳಿ ನಿಂತಿದ್ದ ಕಂಡಕ್ಟರ್ ಬಳಿ ಮಹಿಳೆ ಸಮಯ ಕೇಳಲು ಮುಂದಾಗಿದ್ದಾರೆ.ಆಗ ಆಕೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದೊಯ್ದು ಡ್ರೈವರ್ ಕಂಡಕ್ಟರ್ ಅತ್ಯಾಚಾರ ಎಸಗಿದರೆಂದು ಆಕೆ ದೂರಿದ್ದಾರೆ.
ದೆಹಲಿಯ ರಾಣಿಬಾಗ್ ಪ್ರದೇಶದಲ್ಲಿ ಕೃತ್ಯ ಎಸಗಲಾಗಿದ್ದು, ಸುಮಾರು 7 ಕಿ.ಮೀವರೆಗೆ ಬಸ್ ಚಲಿಸುತ್ತಲೇ ಇತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಮಹಿಳೆಯನ್ನು ಬಸ್ಸಿನಿಂದ ಹೊರದಬ್ಬಿದ್ದಾರೆ.
ಇದರಿಂದ ಮಹಿಳೆಗೆ ಗಾಯಗಳಾಗಿವೆ. ಸದ್ಯ ಘಟನೆ ಕುರಿತು ಹೆಚ್ಚಿನ ತನಿಖೆಗಾಗಿ ಕೃತ್ಯಕ್ಕೆ ಬಳಸಿದ ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡು ಡ್ರೈವರ್ ಕಂಡಕ್ಡರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
