ಮೈಸೂರು: ಸಾಂಸ್ಕೃತಿಕ ನಗರಿಯನ್ನು ಸ್ವಚ್ಛತೆಯಲ್ಲಿ ನಂಬರ್ ಒನ್ ಮಾಡಲು
ಶ್ರಮಿಸಿದ ಪಾಲಿಕೆ ಅಧಿಕಾರಿಗಳು ಮೊದಲು ಖಾಲಿ ನಿವೇಶನ, ಉದ್ಯಾನವನ ಮತ್ತು ಪ್ರಮುಖ ವೃತ್ತಗಳಲ್ಲಿ ತ್ಯಾಜ್ಯ ತೆರವಿಗೆ ಸಮಿತಿ ರಚಿಸಿ ಕಾರ್ಯರೂಪಕ್ಕೆ ತರಬೇಕೆಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ನೂತನ ಬಡವಾಣೆಗಳು ಮತ್ತು ಸುಮಾರು ವರ್ಷಗಳಿಂದ ಖಾಲಿ ಬಿಟ್ಟಿರುವ ನಿವೇಶನಗಳ ಮಾಲೀಕರು ತಮ್ಮ ಜಾಗಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ, ಇದರ ಬಗ್ಗೆ ಆರೋಗ್ಯಾಧಿಕಾರಿಗಳು ನೋಟಿಸ್ ಜಾರಿಗೊಳಿಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವುದರಿಂದ ಸಾಂಕ್ರಮಿಕ ರೋಗ-ರುಜಿನ ಹರಡುವಿಕೆಯನ್ನು ತಡೆಗಟ್ಟವ ಬಗ್ಗೆ ನಗರಪಾಲಿಕೆ ಅಧಿಕಾರಿಗಳು ಟಾಸ್ಕ್ ಫೋರ್ಸ್ ರಚಿಸಬೇಕು ಮತ್ತು ಸರ್ಕಾರದ ವತಿಯಿಂದ ಬಡಾವಣೆಗಳಲ್ಲಿ ಖಾಲಿ ನಿವೇಶನ ಸ್ವಚ್ಛಗೊಳಿಸಲು ನಗರಪಾಲಿಕೆ ಮತ್ತು ಮೂಡ ಒಂದಷ್ಟು ತೆರಿಗೆ ಹಣವನ್ನ ವಾರ್ಷಿಕವಾಗಿ ಸಂದಾಯ ಮಾಡಬೇಕು. ಜನಸಾಮನ್ಯರಿಗೆ ಸೇವೆ ಮತ್ತು ಸುರಕ್ಷೆತೆ ನೀಡಲು ಮೊದಲ ಆದ್ಯತೆ ನೀಡಬೇಕು ಇಲ್ಲವಾದಲ್ಲಿ ಮೈಸೂರು ಸ್ವಚ್ಛನಗರಿ ಎಂಬುದು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿಬಿಡುತ್ತದೆ ಎಂದು
ವಿಕ್ರಂ ಅಯ್ಯಂಗಾರ್ ಹೇಳಿದ್ದಾರೆ.
