(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಹಳೇ ಹಂಪಾಪುರ ಸರ್ಕಾರಿ ಶಾಲೆಯ ಕಟ್ಟಡಗಳ ಗೋಡೆಗಳು ಶಿಥಿಲಗೊಂಡಿದ್ದು, ಕುಸಿದು ಬೀಳುವಂತಿವೆ ಮಕ್ಕಳು,ಪೋಷಕರು ಆತಂಕ ಪಟ್ಟಿದ್ದಾರೆ.
ಮಕ್ಕಳು ಈ ಶಿಥಿಲವಾದ ಕಟ್ಟಡದೊಳಗೆ ಹೋಗಿ ಆಟ ಆಡುತ್ತಾರೆ, ಮಕ್ಕಳ ಮೇಲೆ ಯಾವ ಸಂಧರ್ಭದಲ್ಲಿ ಗೋಡೆ ಕುಸಿದು ಬೀಳುವುದೋ ಹೇಳಲಾಗದು.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಗೆ ಗ್ರಾಮಸ್ಥರು ಮಾನವಿ ಮಾಡಿದರೂ ಹೊಣೆಗೇಡಿ ಅಧಿಕಾರಿಗಳ ದಿವ್ಯಾ ನಿರ್ಲಕ್ಷ ದಿಂದ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಿಂದ ಕೇವಲ 4-5 ಕಿಮೀ ದೂರದಲ್ಲಿರುವ ಗ್ರಾಮದ ಈ ಸರ್ಕಾರಿ ಶಾಲೆಯಲ್ಲಿ ಪ್ರಸ್ತುತ 1 ರಿಂದ 7 ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ವಿಶಾಲವಾದ ಮೈದಾನವಿದೆ, 2 ಅಡಿಗೆ ಮನೆ ಸೇರಿದಂತೆ 8 ರಿಂದ 10 ಶಾಲಾ-ಕೊಠಡಿಗಳಿವೆ, 1 ಶೌಚಗೃಹ ಇದೆ, ಈ ಪೈಕಿ 3 ಹಳೆಯ ಶಾಲಾ ಕಟ್ಟಡಗಳು,1 ಅನ್ನಪೂರ್ಣ ಅಡಿಗೆ ಮನೆ, 6 ಶೌಚಗೃಹಗಳು ಅನುಪಯುಕ್ತವಾಗಿದೆ, ಹಳೆಯ ಶೌಚಾಲಯಗಳು ತೀರ ಅನುಪಯುಕ್ತ ವಾಗಿದ್ದು ಸರಿಸೃಪಗಳ ಆವಾಸ ಸ್ಥಾನವಾಗಿವೆ.
ಮಕ್ಕಳು ಪಠ್ಯೇತರ ಚಟುವಟಿಕೆ ವೇಳೆ ಅಲ್ಲೆಲ್ಲ ಓಡಾಡುವುದರಿಂದ ಸಮಸ್ಯೆಯಾಗಲಿದೆ, ಯಾವ ಸಂಧರ್ಭದಲ್ಲಿ ಹಾವು, ಚೇಳು, ಕ್ರಿಮಿಕೀಟಗಳು ದಾಳಿ ಮಾಡುತ್ತವೋ ಗೊತ್ತಿಲ್ಲ ಎಂದು ಗ್ರಾಮಸ್ಥರು ಆತಂಕಪಟ್ಟಿದ್ದಾರೆ.
ಕೆಲವು ಯುವಕರು ಹಳೆಯ ಕಟ್ಟಡದ ಹೆಂಚುಗಳನ್ನು ಬಿಚ್ಚಿದ್ದಾರೆ. ಇದನ್ನು ಕಂಡ ಯುವಕನೊಬ್ಬ ಅದನ್ನು ವಿಡಿಯೋ ಮಾಡಿ ಶಾಲಾ ಮುಖ್ಯ ಶಿಕ್ಷರ ಮೊಬೈಲ್ ನಂಬರಿಗೆ ವಾಟ್ಸಾಪ್ ಮಾಡಿದ್ದಾನೆ. ಇದರಿಂದ ಇಬ್ಬರ ನಡುವೆ ಸಣ್ಣಪುಟ್ಟ ಗಲಾಟೆ ನಡೆದು ಪ್ರಕರಣ ಕೊಳ್ಳೇಗಾಲ ಪಟ್ಟಣ ಪೊಲಿಸ್ ಠಾಣೆ ಮೆಟ್ಟಿಲೇರಿ ಮೂವರ ವಿರುದ್ದ ಪ್ರಕರಣ ಕೂಡಾ ದಾಖಲಾಗಿದೆ.
ಮೇ. 01 ರಂದು ಕೊಳ್ಳೇಗಾಲ ತಾಲ್ಲೂಕು ಹಳೇಹಂಪಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡದಲ್ಲಿನ ಹೆಂಚುಗಳನ್ನು ಸುನಂದರಾಜ್ ಸ್ನೇಹಿತರು ನಟರಾಜು ಹಾಗೂ ಆನಂದ್ ಕುಮಾರ್ ಸ್ವಂತಕ್ಕೆ ಎತ್ತಿಕೊಳ್ಳುತ್ತಿದ್ದರು ಇದನ್ನು ಕಂಡ ನಾನು ವೀಡಿಯೋ ಮಾಡಿ ಶಾಲಾ ಶಿಕ್ಷಕರಾದ ಶಿವಕುಮಾರ್ ಎಂಬುವವರ ವಾಟ್ಸಾಪ್ ನಂಬರ್ 9986460639, ಗೆ ವಿಡಿಯೋ ಕಳುಹಿಸಿ ಕರೆಮಾಡಿ ಮಾಹಿತಿ ಕೊಟ್ಟಿದ್ದೇನೆ. ಮಾಹಿತಿಕೊಟ್ಟ ನಂತರ ಸುನಂದರಾಜ್ ಗ್ರಾಮದ ಅಂಬೇಡ್ಕರ್ ಸರ್ಕಲ್ ನಲ್ಲಿ ಬಂದು ಸ್ಕೂಲ್ ಮಾಸ್ಟರ್ ಗೆ ಕಂಪ್ಲೇಟ್ ಕೊಡ್ತೀಯ ಎಂಗದೆ ಮೈಗೆ ಎಂದು ಕೊಲೆ ಬೆದರಿಕೆ ಹಾಕಿ ಹೋದ, ಅದಕ್ಕೆ ಕಾನೂನು ಕ್ರಮಕ್ಕಾಗಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಬಳಿಕ ಮತ್ತೇ ಇದೇ ಮೇ 6 ರಂದು ಸುನಂದರಾಜ್ ಹಾಗೂ ಆತನ ಸ್ನೇಹಿತ ಶಿವಮಲ್ಲು ಬಂದು ಆಟೋದಲಿ ಹೋಗುವಾಗ ನನ್ನ ಅಡ್ಡ ಹಾಕಿ ಮತ್ತೇನಾನದರು ಮುಂದುವರೆದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಮನೆಯಲ್ಲಿ ನನ್ನ ತಾಯಿ ಒಬ್ಬರೇ ಇದ್ದಾಗ ಸುನಂದರಾಜ್ ಮತ್ತು ಶಿವಮಲ್ಲು ಹಾಗೂ ಸೋಮಣ್ಣ ಹೋಗಿ ಬೆದರಿಸಿದ್ದಾರೆ.
ಇದು ಸರ್ಕಾರಿ ಶಾಲಾ ಶಿಕ್ಷಕರು ಮಾಡಬೇಕಾದ ಕೆಲಸ ವಾದುದರಿಂದ ಈ ಘಟನೆ ನನ್ನನ್ನು ಪ್ರಾಣಾ ಪಾಯಕ್ಕೆ ನೂಕಿದೆ ಇದಕ್ಕೆ ಶಿಕ್ಷಕರು ಕಾರಣ ಇವರು ಮಾಹಿತಿ ಕೊಟ್ಟರು ಕೆಲಸ ಮಾಡದೇ ಇದ್ದುದರಿಂದ ಹಾಗೂ ಮಾಹಿತಿಯನ್ನು ಸೋರಿಕೆ ಮಾಡಿದ್ದರಿಂದ ನನ್ನ ಜೀವದ ಜೊತೆ ಆಟವಾಡುವಂತಾಗಿದೆ ಕೂಡಲೇ ಈ ಪ್ರಕರಣವನ್ನು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಂಡು ನ್ಯಾಯ ನೀಡಬೇಕು, ತಡವಾದರೆ ಸಾವು ನೋವು ಎದುರಾಗುವ ಸಂಭವವಿದೆ ಎಂದು ನಂದೀಶ್ ಎಂಬ ಯುವಕ ದೂರು ನೀಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 2020 ರಿಂದಲೂ ಗ್ರಾಮಸ್ಥರು ಈ ಹಳೇಯ ಕಟ್ಟಳಗಳನ್ನು ತೆರವುಗೊಳಿಸುವಂತೆ ಸಂಬಂಧ ಪಟ್ಟವರಿಗೆ ಮನವಿ ಮಾಡುತ್ತಲೆ ಬಂದಿದ್ದೇವೆ. ಶಾಲೆಯಲ್ಲಿ ಹಿಂದೆ ಇದ್ದ ಮುಖ್ಯ ಶಿಕ್ಷಕಿ ಮಾಣಿಕ್ಯ ಅವರು ಶಿಥಿಲಗೊಂಡಿರುವ ಕಟ್ಟಡಗಳನ್ನು ಕೆಡವಲು ಈಗಾಗಲೇ ಮನವಿ ಸಲ್ಲಿಸಲಾಗಿದೆ ಆದರೆ ಇದುವರೆಗೂ ಬಂದು ಕಟ್ಟಡವನ್ನು ಕೆಡವಿಲ್ಲ ಎಂದು ತಿಳಿಸಿದ್ದರು.
ಶಾಲೆಯು ಇಷ್ಟು ದುಸ್ಥಿತಿಗೆ ತಲುಪಿದ್ದರೂ ಇತ್ತ ಸಂಬಂಧಪಟ್ಟ ಕ್ಷೇತ್ರಶಿಕ್ಷಣಾಧಿಕಾರಿಗಳಾಗಲಿ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಲಿ ಇತ್ತ ಗಮನ ಹರಿಸಲಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಅಧಿಕಾರಿಗಳ ಈ ನಿರ್ಲಕ್ಷದಿಂದ ಗ್ರಾಮದಲ್ಲಿ ಅಶಾಂತಿ ನೆಲಸಲು ಕಾರಣವಾಗಿದೆ ಎಂದು ಹೇಳಿದ್ದಾರೆ.

