ಪಾಂಡವಪುರ: ಪಾಂಡವಪುರ ತಾಲೂಕಿನಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ದೋಣಿ ಮಗುಚಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ಪಾಂಡವಪುರ ತಾಲ್ಲೂಕಿನ ಕೆ.ಆರ್.ಎಸ್ ಹಿನ್ನೀರಿನಲ್ಲಿ ಬೋಟಿಂಗ್ ಹೋಗಿದ್ದ ವೇಳೆ ಗಾಳಿಯ ಹೊಡೆತಕ್ಕೆ ಬೋಟ್ ಮೊಗಚಿ ಕೇರಳ ಮೂಲದ ಇಬ್ಬರು ಜಲಸಮಾದಿಯಾಗಿದ್ದಾರೆ
ಮತ್ತೊಂದು ಪ್ರಕರಣದಲ್ಲಿ ಕೆ.ಆರ್.ಎಸ್ ಹಿನ್ನೀರಿನ ಮೀನು ಸಾಕಾಣಿಕೆ ಸ್ಥಳದಲ್ಲಿ ಮೀನಿಗೆ ಆಹಾರ ಹಾಕಲು ಹೋಗುತ್ತಿದ್ದ ಯುವಕ ದೋಣಿ ಮಗುಚಿ ಬಿದ್ದು ಸಾವನ್ನಪ್ಪಿದ್ದಾನೆ.
ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ ಗ್ರಾಮದ ಯುವಕ ಮೃತಪಟ್ಟವನೆಂದಿ ಗುರುತಿಸಲಾಗಿದೆ.
ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
