ಮೈಸೂರು,ಮೇ1: ಸುತ್ತೂರು ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠದಲ್ಲಿ ರೈತರ ಶಿಬಿರವನ್ನು ಮೇ. 1 ರಂದು ಹಮ್ಮಿಕೊಳ್ಳಲಾಯಿತು.
ಕಾರ್ಮಿಕರ ದಿನದಂದೇ ರೈತರ ಶಿಬಿರವನ್ನು ಹಮ್ಮಿಕೊಂಡು ರೈತರು ಎದುರಿಸುತ್ತಿರುವ ಸಮಸ್ಯೆಗಳು, ಪರಿಹಾರಗಳು,ಅವರ ಅಗತ್ಯತೆ ಬಗ್ಗೆ ಚರ್ಚಿಸಲಾಯಿತು.
ಶಿಬಿರವನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಅಶೋಕ್ ದಳವಾಯಿ ಅವರು ಉದ್ಘಾಟಿಸಿದರು.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಎಸ್ ವಿ ಸುರೇಶ್,
ಕೃಷಿ ತಂತ್ರಜ್ಞ ಕಲ್ಚರ್ ಸಂಸ್ಥೆ ಅಧ್ಯಕ್ಷರು ಡಾ, ಎ ಬಿ ಪಾಟೀಲ್,ಜೆ ಎಸ್ ಎಸ್ ಪದಾಧಿಕಾರಿಗಳು,ಅಧ್ಯಕ್ಷರು, ರೈತಸಂಘ ಮತು ಹಸಿರು ಸೇನೆ ಉಪಾಧ್ಯಕ್ಷರು ಪ್ರಕಾಶ್ ದೇವಶೆಟ್ಟಿ, ಕೊಣಸೂರು ಶಿವಾರಾಜು,
ಮಹಿಳಾ ಅಧ್ಯಕ್ಷರು ಕಾವೇರಮ್ಮ ಮತ್ತಿತರರು ಹಾಜರಿದ್ದರು.
