ಬೆಂಗಳೂರು: ಬೆಂಗೂರಿನ ಮಾಚೋಹಳ್ಳಿಯ ಆಶೀರ್ವಾದ್ ಲೇಔಟ್ ನಲ್ಲಿರುವ ವಿದ್ಯಾವರ್ಧಕ ಸ್ಮಾರ್ಟ್ ಸ್ಕೂಲ್ ಪ್ರತಿ ವರ್ಷದಂತೆ ಈ ವರ್ಷವು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಕ್ಕೆ 100 ಫಲಿತಾಂಶ ಪಡೆದು ಮಾದರಿಯಾಗಿದೆ.
ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಇಪ್ಪತ್ತು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಕ್ಕಳ ಸಾಧನೆಗೆ ಮತ್ತು ಶಾಲೆಯ ಫಲಿತಾಂಶಕ್ಕೆ ಬೆಂಬಲಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಿರೀಶ್.ಎಂ.ಟಿ ಹಾಗೂ ಪಾಂಶುಪಾಲರಾದ ಸೌಮ್ಯ ಅವರು ಅಭಿನಂದಿಸಿದ್ದಾರೆ.
