ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ದಾಳಿಗೆ ಯತ್ನಿಸಲಾಗಿದ್ದು,ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಶನಿವಾರ ತಡರಾತ್ರಿ ನಡೆದ ಭೋಜನ ಕೂಟದಲ್ಲಿ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಅದೃಷ್ಟವಶಾತ್ ಟ್ರಂಪ್ ಬಚಾವಾಗಿದ್ದಾರೆ.
ದಾಳಿಗೆ ಮುನ್ನವೆ ಅಮೆರಿಕದ ರಹಸ್ಯ ಸೇವಾ ಏಜೆಂಟರು ದಾಳಿಕೋರನನ್ನು ನೆಲಕ್ಕೆ ಬಡಿದು ಹಿಡಿದಿದ್ದು ಟ್ರಂಪ್ ಜೀವ ಉಳಿಸಿದ್ದಾರೆ.
ದಾಳಿ ವೇಳೆ ಒಬ್ಬ ಅಮೆರಿಕನ್ ಏಜೆಂಟ್ ಗಾಯಗೊಂಡಿದ್ದಾರೆ ಆದರೆ ಗುಂಡು ನಿರೋಧಕ ಜಾಕೆಟ್ ಧರಿಸಿದ್ದರಿಂದ ಅವರ ಜೀವ ಉಳಿದಿದೆ.
ದಾಳಿಕೋರನನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ನ ಅರೆಕಾಲಿಕ ಶಿಕ್ಷಕ 31 ವರ್ಷದ ಕೋಲ್ ಅಲೆನ್ ಎಂದು ಗುರುತಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ರಮ ನಿಗದಿಯಾಗಿದ್ದ ಸಂದರ್ಭದಲ್ಲಿ ಶಂಕಿತ ವ್ಯಕ್ತಿ ಹೋಟೆಲ್ಗೆ ಬಂದೂಕಿನ ಜೊತೆಗೆ ಹೇಗೆ ಬಂದನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಗುಂಡು ಹಾರಿಸಿದ ಶಂಕಿತನ ಬಗ್ಗೆ ವಾಷಿಂಗ್ಟನ್ ಡಿಸಿ ಪೊಲೀಸರು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಶಂಕಿತನು ಅದೇ ಹೋಟೆಲ್ನಲ್ಲಿ ತಂಗಿದ್ದ, ಇದರಿಂದಾಗಿ ಕಾರ್ಯಕ್ರಮದ ಸಮಯದಲ್ಲಿ ಅವನಿಗೆ ಪ್ರವೇಶಿಸಲು ಸುಲಭವಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಜೆಫ್ರಿ ಕ್ಯಾರೊಲ್ ಹೇಳಿದ್ದಾರೆ.
7 ರಿಂದ 8 ಸುತ್ತು ಗುಂಡು ಹಾರಿಸಿದ ನಂತರ, ಸಭಾಂಗಣದಲ್ಲಿ ಆತಂಕ,ಚೀರಾಟ ಕೇಳಿಬಂದಿತು,ಅನೇಕ ಅತಿಥಿಗಳು ಮೇಜುಗಳ ಕೆಳಗೆ ಅಡಗಿಕೊಂಡರು,ಕೆಲವರು ಹೊರಗೆ ಬರಲು ಭಯಪಟ್ಟರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷೆ ಜೆಡಿ ವ್ಯಾನ್ಸ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಅಂತೂ ಇದು ಎರಡನೆ ಬಾರಿ ಟ್ರಂಪ್ ಮೇಲೆ ಅಟ್ಯಾಕ್ ಆಗಿದೆ.ಅವರ ಅದೃಷ್ಟ ಚೆನ್ನಾಗಿದ್ದು ಬಚಾವಾಗಿದ್ದಾರೆ.ಅಮೇರಿಕಾ ಅಧ್ಯಕ್ಷರ
ಭದ್ರತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
