ಮೈಸೂರು: ಡಾಕ್ಟರ್ ರಾಜಕುಮಾರ್ ಅವರ 97ನೇ ಹುಟ್ಟುಹಬ್ಬವನ್ನು ಮೈಸೂರು ಜಿಲ್ಲಾ ಅಲೆಮಾರಿ ಸಂಘಟನೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಲೆಮಾರಿ ಸಮುದಾಯದ ಅತ್ಯಂತ ಹಿಂದುಳಿದ ವಿದ್ಯಾರ್ಥಿ ಕುಮಾರ ಎಂ ನಂದೇಶ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕವನ್ನು ಪಡೆದಿದ್ದು,ಅವರನ್ನು ಗೌರವಿಸಿ ಸನ್ಮಾನಿಸುವ ಮೂಲಕ ಮೇರು ನಟನ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇಂತಹ ಮೇರು ನಟನ ಹುಟ್ಟು ಹಬ್ಬವನ್ನು ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವೇ ಸರಿ ಎಂದು ಸಂಘಟನೆಯವರು ಹೆಮ್ಮೆಯಿಂದ ಹೇಳಿದರು.
ಇಡೀ ಪ್ರಪಂಚದಲ್ಲಿ ನುಡಿದಂತೆ ಬರೆಯುವ ಏಕೈಕ ಭಾಷೆ ನಮ್ಮ ಹೆಮ್ಮೆಯ ಕನ್ನಡ, ಕರ್ನಾಟಕದ ವರನಟ ಎಂದು ಪ್ರಸಿದ್ಧರಾದ ಡಾಕ್ಟರ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಮೈಸೂರು ಜಿಲ್ಲಾ ಅಲೆಮಾರಿ ಸಂಘಟನೆಯಿಂದ ಆಚರಿಸಬೇಕೆಂಬ ಆಲೋಚನೆಯಿಂದ ವಿದ್ಯಾರ್ಥಿಯನ್ನು ಸನ್ಮಾನಿಸಿ ಆಚರಿಸಿದ್ದೇವೆ ಎಂದು ಅಲೆಮಾರಿ ಸಂಘಟನೆಯ ಗೌರವಾಧ್ಯಕ್ಷ ಜಗನ್ನಾಥ್, ಅಧ್ಯಕ್ಷ ನಾಗೇಶ ಯಾದವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯೋಗೀಶ್ ಯಾದವ್, ಕಾರ್ಯದರ್ಶಿ ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಖಜಾಂಜಿ ಶ್ಯಾಮ್ ಕುಮಾರ್, ಕಾರ್ಯಾಧ್ಯಕ್ಷ ರಾದ ಸತ್ಯನಾರಾಯಣ , ರಂಗಸ್ವಾಮಿ, ಹರೀಶ್, ನಂದ ಗೋಪಾಲ ಮತ್ತಿತರರು ಹಾಜರಿದ್ದರು.
