ರಷ್ಯಾ: ಸರ್ಕಸ್ನಲ್ಲಿ ಸೇಫ್ಟಿನೆಟ್ ದಾಟಿ ಹುಲಿಯೊಂದು ಪ್ರೇಕ್ಷಕರ ಗ್ಯಾಲರಿಗೆ ಹಾರಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ರಷ್ಯಾದಲ್ಲಿ ನಡೆದಿದೆ.
ಪ್ರೇಕ್ಷಕರು ಖುಷಿಯಾಗಿ ವೀಕ್ಷಿಸುತ್ತಿದ್ದಾಗಲೇ ಹುಲಿಯೊಂದು ಇದ್ದಕ್ಕಿದ್ದಂತೆ ಪ್ರೇಕ್ಷಕರತ್ತ ಹಾರಿದೆ.
ಕ್ಯಾಮೆರಾದಲ್ಲಿ ಸೆರೆಹಿಡಿಯಗಿರುವ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮೊದಲೇ ರಷ್ಯನ್ ಸರ್ಕಸ್ ಬಹಳ ಫೇಮಸ್.ಇದೀಗ ಈ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ.
ಆ ಸರ್ಕಸ್ನಲ್ಲಿ ಮೂರು ಹುಲಿಗಳು ಹಾಗೂ ಒಬ್ಬ ತರಬೇತುದಾರನಿದ್ದ.ಸುರಕ್ಷತಾ ನೆಟ್ ಹರಿದುಬೀಳುವುದು ವಿಡಿಯೋದಲ್ಲಿ ಕಾಣುತ್ತದೆ,ನೆಟ್ ಹರಿದು ಬಿದ್ದಾಗ ಹುಲಿಯು ವೇದಿಕೆ ಎದುರಿದ್ದ ಪ್ರೇಕ್ಷಕರತ್ತ ಹಾರಿದೆ.
ತಕ್ಷಣ ಸರ್ಕಸ್ ಮ್ಯಾನೇಜರ್ ಯಾರೂ ಕೂಗಾಡದಂತೆ ಓಡದಂತೆ ಪ್ರೇಕ್ಷಕರಿಗೆ ಸಲಹೆ ನೀಡಿದರು.ತಕ್ಷಣ ತರಬೇತುದಾರ ಹುಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು,ಪ್ರೇಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.
