ಮೈಸೂರು: ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಪುನರ್ಜೀವನಗೊಳಿಸಿದ ಮಹಾನ್ ಆಚಾರ್ಯರಾದ ಆದಿ ಗುರು ಶಂಕರಾಚಾರ್ಯರು ಮತ್ತು ಭಗವತ್ ರಾಮಾನುಜಾಚಾರ್ಯರ ಕೊಡುಗೆ ಅಪಾರ ಎಂದು ಶಾಸಕ ಜಿ.ಡಿ ಹರೀಶ್ ಗೌಡ ಬಣ್ಣಿಸಿದರು.
ಮೈಸೂರಿನ ರಾಮಕೃಷ್ಣ ನಗರದ ಈ ಅಂಡ್ ಎಫ್ ಬ್ಲಾಕ್ ನಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಆದಿ ಗುರು ಶ್ರೀ ಶಂಕರಾಚಾರ್ಯರ ಹಾಗೂ ಭಗವದ್ ಶ್ರೀ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಾಸಕರು ಮಾತನಾಡಿರು.
ಜಗದ್ಗುರು ಆದಿ ಶಂಕರಾಚಾರ್ಯರು ಭಾರತೀಯ ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ,ಅವರು ರಚಿಸಿದ ಸ್ತೋತ್ರಗಳು ಮತ್ತು ಸೌಂದರ್ಯ ಲಹರಿ ಯಂತಹ ಕೃತಿಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು.
ವಿಶ್ವವೆ ಸಂಕಿರಣ ಪರಿಸ್ಥಿತಿಯಲ್ಲಿರುವಾಗ ಆಧ್ಯಾತ್ಮ ಮತ್ತು ಶಂಕರಾಚಾರ್ಯರ ತತ್ವಗಳು ಶಾಂತಿಯನ್ನು ನೀಡಬಲ್ಲವು ಈಗ ಜಗತ್ತಿನಲ್ಲಿ ಮನುಷ್ಯನಿಗೆ ಅತ್ಯಂತ ಕಠಿಣವಾದ ಕೆಲಸವೆಂದರೆ ಅದು ಮನಸ್ಸಿನ ನಿಯಂತ್ರಣ. ಶಂಕರಾಚಾರ್ಯರ ತತ್ವಗಳನ್ನು ಮತ್ತು ಸ್ತೋತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಆತ್ಮಸ್ಥೈರ್ಯ ದೊರೆಯುತ್ತದೆ ಎಂದು ಶಾಸಕರು ಹೇಳಿದರು.
ಭಾರತ ದೇಶವು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವಾಗಿದೆ , ಇಂತಹ ಜಯಂತಿಗಳು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿದೆ ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಘ-ಸಂಸ್ಥೆಗಳ ಕ್ರಮ ಶ್ಲಾಘನೀಯವಾದದ್ದು ಎಂದು ಜಿ.ಡಿ.ಹರೀಶ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯ ರಂತಹ ಮಹಾನ್ ಗುರುಗಳನ್ನು ಸ್ಮರಿಸುವುದು ನಮ್ಮ ಭಾಗ್ಯ ಎಂದು ತಿಳಿಸಿದರು.
ಕುಮಾರ ಪರ್ವ ಸಂಧರ್ಭದಲ್ಲಿ
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ರಕ್ಷಣೆಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಮೈಸೂರು ಬ್ರಾಹ್ಮಣ ಯುವ ವೇದಿಕೆಯವರು ಸಹ ಮನವಿ ಮಾಡಿದ್ದರು, ಅದರಂತೆಯೇ ಹೆಚ್.ಡಿ ಕುಮಾರಸ್ವಾಮಿಯವರು ಬ್ರಾಹ್ಮಣ ಮಂಡಳಿ ರಚಿಸಿ ಶಂಕರ ಜಯಂತಿ ಜಾರಿಗೆ ತಂದರು, ಮುಂದಿನ ದಿನಗಳಲ್ಲಿ ಬ್ರಾಹ್ಮಣ ಯುವಕರಿಗಾಗಿ ಶಿಕ್ಷಣ ಉದ್ಯೋಗ ಪ್ರೋತ್ಸಾಹಕ್ಕಾಗಿ ಹಲವಾರು ಯೋಜನೆಗಳನ್ನ ತರಲು ವಿಪ್ರ ನಿಯೋಗ ರಚಿಸಿ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಡಾಕ್ಟರ್ ಕೆ ರಘುರಾಮ ವಾಜಪೇಯಿ,ಡಾ. ಎಸ್ ಪಿ ಯೋಗಣ್ಣ,ವಿದ್ವಾನ್ ಕೃಷ್ಣಮೂರ್ತಿ,ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್,ವಿಜಯ್ ಕುಮಾರ್, ಜಯ ಸಿಂಹ, ಮಿರ್ಲೆ ಪಣೀಶ್,ಶ್ರೀಕಾಂತ್ ಕಶ್ಯಪ್,ಜಗದೀಶ್ ,ಗಗನ,ಎಸ್ ಬಿ ವಾಸುದೇವಮೂರ್ತಿ,ರಾಘವೇಂದ್ರ,ಲಕ್ಷ್ಮೀಶ್ ,ಸಂತೋಷ್,ಪ್ರಸನ್ನ ಹೆಗಡೆ,ಚಮಯ್ಯ, ಗಂಗಾಧರ್,ಮಾದೇಗೌಡ,ರಾಮಕೃಷ್ಣಪ್ಪ, ಪುಟ್ಟಮ್ಮಣ್ಣಿ, ವಸುಮತಿ, ನಾಗರಾಜ್ ಜನ್ನು, ಶೃತಿ ನಾಗರಾಜ್, ಪ್ರೇಮ ಮತ್ತಿತರರು ಹಾಜರಿದ್ದರು.
