ಮೈಸೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಕಿರಾತಕಿ ಪತ್ನಿ ತನ್ನ ಪತಿಯನ್ನು ಹತ್ಯೆ ಮಾಡಿಸಿರುವ ಹೇಯ ಘಟನೆ ನಡೆದಿದೆ.
ಹತ್ಯೆ ನಡೆದ 24 ಗಂಟೆಯಲ್ಲಿ ಆರೋಪಿ ಪತ್ತೆ ಹಚ್ಚಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಕೊಲೆಯದವನು ಜವರಪ್ಪ ಎಂಬ ನತದೃಷ್ಟ.
ಸಿದ್ದೇಶ ಬಂಧಿತ ಕೊಲೆಗಾರ.ಅಮೃತ ಕೊಲೆಗೆ ಸಂಚು ರೂಪಿಸಿದ ಕಿರಾತಕಿ ಪತ್ನಿ.
ಈ ಕೊಲೆಯ ಪ್ರಮುಖ ಆರೋಪಿ ಸಿದ್ದೇಶ್ ಮೇಸ್ತ್ರಿ. ಆರೋಪಿ ಸಿದ್ದೇಶ್ನನ್ನು ಜವರಪ್ಪ ತನ್ನ ಮನೆಗೆ ಒಮ್ಮೆ ಕರೆದುಕೊಂಡು ಹೋಗಿದ್ದ. ಈ ವೇಳೆ ಜವರಪ್ಪನ ಹೆಂಡತಿ ಅಮೃತ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ.
ಬಳಿಕ ಫೋನ್ ನಂಬರ್ ಪಡೆದು ಮಾತುಕತೆ ನಡೆಸಲಾರಂಭಿಸಿದ್ದಾರೆ.ಈ ವಿಚಾರವಾಗಿ ಆಗಾಗ ಪತಿ-ಪತ್ನಿ ನಡುವೆ ಸಣ್ಣ ಪುಟ್ಟದಾಗಿ ಗಲಾಟೆಯಾಗುತ್ತಿತ್ತು.
ಇದೇ ಏಪ್ರಿಲ್.14ರಂದು ಅಮೃತ ತನ್ನ ಮಕ್ಕಳ ಜೊತೆ ತವರು ಮನೆಗೆ ಹೋಗಿದ್ದಳು. ಈ ವೇಳೆ ಹೆಂಡತಿ ನೋಡಲು ಬರುತ್ತೇನೆ ಎಂದು ಜವರಪ್ಪ ಹೆಂಡತಿಗೂ ಮಾಹಿತಿ ನೀಡಿದ್ದ. ಗಂಡ ಬರುವ ಮಾಹಿತಿಯನ್ನು ಆರೋಪಿ ಸಿದ್ದೇಶ್ಗೆ ಅಮೃತ ತಿಳಿಸಿದ್ದಳು.
ಇಬ್ಬರೂ ಪ್ಲ್ಯಾನ್ ಮಾಡಿದ್ದಾರೆ, ಗಂಡನ ಎಲ್ಲಾ ಚಲನವಲನವನ್ನು ಸಿದ್ದೇಶ್ಗೆ ಮಾಹಿತಿ ನೀಡಿದ್ದಾಳೆ, ಪತಿ ಇದ್ದರೆ ಇಬ್ಬರ ಸಂಬಂಧಕ್ಕೆ ಅಡ್ಡಿ ಎಂದು ಕೊಲೆಗೆ ಸಂಚು ರೂಪಿಸಿದ್ದಾರೆ.
ಸಿದ್ದೇಶ್ ತನ್ನ ಕಾರಿನಲ್ಲಿ ಜವರಪ್ಪನನ್ನು ಬಾರ್ ಗೆ ಕರೆದುಕೊಂಡು ಹೋಗಿ, ಕಂಠ ಪೂರ್ತಿ ಕುಡಿಸಿ ಮನೆಗೆ ಬಿಡುವುದಾಗಿ ತಿಳಿಸಿ ಕರೆದುಕೊಂಡು ಬಂದು ಮಾರ್ಗ ಮದ್ಯೆ ಜವರಪ್ಪನನ್ನು ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ನಂತರ ಮೃತ ದೇಹವನ್ನು ರಸ್ತೆಯಲ್ಲಿ ಬಿಸಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಮಲ್ಲಿಕಾರ್ಜುನ ಬಾಲದಿಂಡಿ ವಿವರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹದ ಗಾಯದ ಗುರುತನ್ನು ಗಮನಿಸಿ ಕೊಲೆ ಶಂಕೆ ವ್ಯಕ್ತಪಡಿಸಿದ್ದರು.ಕೊಲೆ ಪ್ರಕರಣ ಬೇಧಿಸಲು ಎರಡು ತಂಡ ರಚಿಸಲಾಗಿತ್ತು.
ಘಟನೆ ನಡೆದ 24 ಗಂಟೆಯಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಆರೋಪಿಯನ್ನು ಬಂದಿಸಲಾಗಿದೆ. ಈ ಕೊಲೆಯ ಸಂಚಿನಲ್ಲಿ ಅಮೃತಾಳ ಕೈವಾಡವು ಇದೆ ಎಂದು ಮಾಹಿತಿ ನೀಡಿದರು.
