ಮೈಸೂರು: ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ಅಧಿಕವಾಗಿ, ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ ಹಾಗಾಗಿ
ಕಲಬುರ್ಗಿ ಮಾದರಿಯಲ್ಲಿ ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ಎ ಸಿ ಹೆಲ್ಮೆಟ್ ನೀಡುವಂತೆ ನಗರ ಪೋಲಿಸ್ ಆಯುಕ್ತರಿಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರು ನಗರ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದು ತಿಳಿದಿರುವ ವಿಷಯ. ಪ್ರಸ್ತುತ ದಿನಗಳಲ್ಲಿ ಬೇಸಿಗೆಯ ಕಾರಣ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ಬೇಸಿಗೆಯ ಬಿರು ಬಿಸಿಲಿನ ಬೇಗೆಯಲ್ಲಿ ಕೂಡ ಸುಗಮ ಸಂಚಾರಕ್ಕಾಗಿ ಮೈಸೂರು ಪೋಲಿಸರು ದಿನನಿತ್ಯ ರಸ್ತೆಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ ಅವರ ಪಾಡು ಕೇಳುವವರೇ ಇಲ್ಲ ಎಂದು ತೇಜಸ್ವಿ ಬೇಸರ ಪಟ್ಟಿದ್ದಾರೆ.
ಟ್ರಾಫಿಕ್ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಮಾನವೀಯ ದೃಷ್ಟಿಯಿಂದ ನಗರ ಪೋಲಿಸ್ ಆಯುಕ್ತರು ಬೇಸಿಗೆ ಮುಗಿಯುವವರೆಗೂ ಕಲಬುರ್ಗಿ ಪೊಲೀಸರ ಮಾದರಿಯಲ್ಲಿ ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ಎ ಸಿ ಹೆಲ್ಮೆಟ್ ಗಳನ್ನು ನೀಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.
