ಮೈಸೂರು: 25 ವರ್ಷಗಳ ನಂತರ
ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್ ಅವರ 25 ಕೋಟಿಗೊಬ್ಬ ಸಿನಿಮಾ ರೀ ರಿಲೀಸ್ ಹಿನ್ನೆಲೆಯಲ್ಲಿ ಚಾಮರಾಜ ಜೋಡಿ ರಸ್ತೆಯಲ್ಲಿರುವ ಗಾಯತ್ರಿ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ವಿಷ್ಣು ಅವರ ಬೃಹತ್ ಕಟೌಟ್ ಹಾಕಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ,ಅನ್ನದಾನ ಮಾಡಿ,101 ತೆಂಗಿನಕಾಯಿ ಒಡೆದು ಸಂಭ್ರಮಿಸಿದರು.
25 ವರ್ಷದ ಹಿಂದೆ ಕೋಟಿಗೊಬ್ಬ ಬಿಡುಗಡೆ ಯಾದಾಗ ಇದ್ದ ಸಡಗರ ಈಗಲೂ ಇಮ್ಮಡಿಸಿತ್ತು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ,ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್
ರಾಜೇಶ್,ಪುಕಾರ್ ಸಿದ್ದಪ್ಪ,
ಮದನ್ ,ಬಸವರಾಜು,ಮಹದೇವ್ ,ಸಂತೋಷ್,ನವೀನ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು.
ಚಲನಚಿತ್ರ ನೋಡಲು ಬಂದವರಿಗೆಲ್ಲಾ ಮೈಸೂರು ಪಾಕ್ ವಿರಿಸಲಾಯಿತು.ಈ ಸಂಭ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ನೂರಾರು ಆಟೋ ಚಾಲಕರು ಪಾಲ್ಗೊಂಡಿದ್ದರು.
