ಪಿರಿಯಾಪಟ್ಟಣ: ಪರಿಯಾಪಟ್ಟಣ ತಾ ಹಿಟೆಹೆಬ್ಬಾಗಿಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರಂತರ ಜ್ಯೋತಿ
ಸರಿಪಡಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಅಭಿನಂದಿಸಲಾಯಿತು.
ಪಿರಿಯಾಪಟ್ಟಣ ತಾಲೂಕು ಶೀಗೂರು ಗ್ರಾಮದಲ್ಲಿ ಸುಮಾರು ಹತ್ತು ಮನೆಗಳಿಗೆ ನಿರಂತರ ಜ್ಯೋತಿ ಇಲ್ಲದಿರುವ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಇದಕ್ಕೆ ಸ್ಪಂದಿಸಿದ ಪಿಡಿಒ ನಾಗೇಂದ್ರ ಕುಮಾರ್ ಅವರು ಒಂದು ವಾರದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಆರ್ ಮಂಜುನಾಥ್ ಗೌಡ್ರು, ರಾಜ್ಯ ಯೂತ್ ಅಧ್ಯಕ್ಷ ಕೆ ಆರ್ ಸೋಮೇಗೌಡ್ರು, ರಾಜ್ಯ ಸದಸ್ಯರಾದ ದೇವಶೆಟ್ಟಿ, ಯೂತ್ ತಾ ಅಧ್ಯಕ್ಷ ಮದೇವ್, ತಾ ಉಪಾಧ್ಯಕ್ಷ ಪ್ರಭು, ತಾ ಸಂಚಾಲಕ ಕೊಣಸೂರು ಶಿವರಾಜ್, ಹೋಬಳಿ ಅಧ್ಯಕ್ಷ ಯೋಗಣ್ಣ, ನಾಗೇಂದ್ರ, ಹಾರನಹಳ್ಳಿ ದೇವರಾಜ್ ಆನಂದ್ಗೆರೆ ಮಾದೇವ ಅವರುಗಳು ಪಿಡಿಒ ನಾಗೇಂದ್ರ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
