ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಬಳಿ ರೈಲ್ವೆ ಅಂಡರ್ಪಾಸ್ ನಿರ್ಮಾಣ ಕಾಮಗಾರಿ ಇನ್ನಾ 15 ದಿನ ಗಳಲ್ಲಿ ಆರಂಭವಾಗಲಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳೊಂದಿಗೆ ಕುಕ್ಕರಹಳ್ಳಿ ಕೆರೆ-ಮೈಸೂರು ವಿಶ್ವವಿದ್ಯಾನಿಲಯ ಅಂಡರ್ಪಾಸ್ ಕಾಮಗಾರಿ ಸಂಬಂಧ ನೀಲನಕ್ಷೆ ಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್,63 ಕೋಟಿ ರೂ. ಪ್ರಾಜೆಕ್ಟ್ ಇದಾಗಿದ್ದು, ಮೈಸೂರು ವಿಶ್ವ ವಿದ್ಯಾಲಯದ ಕ್ರಾಫರ್ಡ್ ಭವನ ಮತ್ತು ಕುಕ್ಕರಹಳ್ಳಿ ಕೆರೆ ನಡುವಿನ ಜಂಕ್ಷನ್ನಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡ ಲಾಗುವುದು ಎಂದು ಯದುವೀರ್ ಭರವಸೆ ನೀಡಿದರು.
