ಪಿರಿಯಾಪಟ್ಟಣ: ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರ ಸಭೆಯು ರಾಜ್ಯಾಧ್ಯಕ್ಷರಾದ ಮಂಜುನಾಥ್ ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಿರಿಯಾಪಟ್ಟಣ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಂಘದ ಎಲ್ಲ ಸದಸ್ಯರು ಒಟ್ಟುಗೂಡಿ ಮತ್ತಷ್ಟು ಭದ್ರಗೊಳಿಸುವ ಬಗ್ಗೆ ಚರ್ಚಿಸಿದರು.
ಮುಖ್ಯ ಅತಿಥಿಗಳಾಗಿ ಸ್ವಾಮಿ ಗೌಡ್ರು, ತಾಲೂಕ ಅಧ್ಯಕ್ಷ ಪ್ರಕಾಶ್, ದೇವಶೆಟ್ಟಿ, ಮಹಿಳಾ ತಾಲೂಕು ಅಧ್ಯಕ್ಷೆ ಕಾವೇರಮ್ಮ ಮಾದೇವ್ ಉಪಾಧ್ಯಕ್ಷ ಪ್ರಭು ತಾಲೂಕು ಸದಸ್ಯರು ಕೊಣಸೂರ್ ಶಿವರಾಜ್, ಎಚ್ ಡಿ ಕೋಟೆ ತಾಲೂಕಿನ ಅಧ್ಯಕ್ಷರು ಮಾದೇವ್, ನಂಜನಗೂಡು ತಾಲೂಕಿನ ಸಿದ್ದಪ್ಪ, ಅಧ್ಯಕ್ಷರು ಮಾದೇವ ನಾಯಕರು, ಸರಗೂರೂ ನಟರಾಜ್, ವಿಜಯ್ ಕುಮಾರ್, ಮೈಸೂರು ಜಿಲ್ಲಾಧ್ಯಕ್ಷರು ಸೋಮಣ್ಣ, ದಾಸನಪುರ ಕೋಟೆ ರಾಜಣ್ಣ, ವಿಶ್ವನಾಥ್ ಮತ್ತಿತರರು ಪಾಲ್ಗೊಂಡಿದ್ದರು.
