ತಾಂಡವಪುರ: ಜಿಲ್ಲೆಯ ನಂಜನಗೂಡು ತಾಲೂಕು, ಚಿಕ್ಕಯ್ಯನ ಛತ್ರ ಹೋಬಳಿ ಕೆಂಪಿ ಸಿದ್ದನ ಹುಂಡಿಗ್ರಾಮ ಹಾಗೂ ತಾಂಡಮಾಪುರ ಗ್ರಾಮದಲ್ಲಿ ಮಿನಿ ಉದ್ಯೋಗ ಮೇಳದಲ್ಲಿ ನೂರಕ್ಕೂ ಹೆಚ್ಚು ನಿರುದ್ಯೋಗಿಗಳು ಹೆಸರು ನೋಂದಾಯಿಸಿದ್ದಾರೆ.
ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.
ಕೆಂಪಿ ಸಿದ್ದನ ಹುಂಡಿ ಗ್ರಾಮ ಪಂಚಾಯತಿ ಹಾಗೂ ತಾಂಡವಪುರ ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವಾರು ಗ್ರಾಮಗಳ ನಿರುದ್ಯೋಗಿ ಯುವಕರು ಯುವತಿಯರು ತಮ್ಮ ಹೆಸರನ್ನು ನೊಂದಾಯಿಸಿಕೊಂಡರು.
ಈ ಭಾಗದಲ್ಲಿ ಉದ್ಯೋಗ ಸಮಸ್ಯೆ ಸಾಕಷ್ಟಿದ್ದು ಉದ್ಯೋಗ ಮೇಳದಲ್ಲಿ ನಿರುದ್ಯೋಗಿ ಯುವಕರು ಯುವತಿಯರು ಪಾಲ್ಗೊಂಡು ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂದು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಯುವಕರು ಮತ್ತು ಯುವತಿಯರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಇನ್ನು ಹೆಚ್ಚಿನ ನಿರುದ್ಯೋಗಿ ಯುವಕರು ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದ್ದು ಅಂತ ನಿರುದ್ಯೋಗಿ ಯುವಕರು ಯುವತಿಯರು ಗ್ರಾಮ ಪಂಚಾಯತಿಯ ಕಚೇರಿಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ಹಾಗೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾದ ಸಿ ಪ್ರಕಾಶ್ ಹಾಗೂ ಕಾರ್ಯದರ್ಶಿಗಳಾದ ಮನ್ನೆಗೌಡ ಕೆ.ಕೆ ಮರಯ್ಯ ಮನವಿ ಮಾಡಿದ್ದಾರೆ.
ಈ ಮಿನಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್,ಸಂಘದ ಸಿ ಪ್ರಕಾಶ್, ಕೆ.ಕೆ ಮರಯ್ಯ ಮನ್ನೇಗೌಡ, ಲೆಕ್ಕ ಸಹಾಯಕರಾದ ಎಸ್ ಪುಟ್ಟರಾಜು ಹಾಗೂ ಕೌಸಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.
